– ಗೆಲ್ಲುವ ವಿಶ್ವಾಸ, ವಿಕಸಿತ ಭಾರತಕ್ಕೆ ಮೋದಿ ಕಾರ್ಯಸೂಚಿಯೂ ರೆಡಿ!
ನವದೆಹಲಿ: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ (Lok Sabha Elections Result) ಮಂಗಳವಾರ ಹೊರಬೀಳಲಿದೆ. ಜೂನ್ 4ರ ಆ ಕ್ಷಣಕ್ಕಾಗಿ ಇಡೀ ದೇಶ ಕೌತುಕದಿಂದ ಕಾಯುತ್ತಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಏಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆಲ್ಲಾ ದೆಹಲಿ ಗದ್ದುಗೆ ಯಾರ ಪಾಲಾಗಲಿದೆ? ಭಾರತ ದೇಶದ ಅಧಿಪತಿ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವೂ ಸಿಗಲಿದೆ. ಇದನ್ನೂ ಓದಿ: 40 ಜೀವಂತ ಗುಂಡುಗಳ ಸಮೇತ ಚೆನ್ನೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ನಟ ಕರುಣಾಸ್
ಎಕ್ಸಿಟ್ ಪೋಲ್ (Exit Poll) ಅಂಕಿ ಅಂಶ ಹೊರಬೀಳುತ್ತಿದ್ದಂತೆ ಎನ್‌ಡಿಎ ಮೈತ್ರಿಕೂಟ 400 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ ಈಗಾಗಲೇ ಸರಣಿ ಸಭೆಗಳನ್ನು ನಡೆಸಿ 100 ದಿನದ ಕಾರ್ಯಸೂಚಿಗಳನ್ನೂ ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಇಂಡಿಯಾ ಒಕ್ಕೂಟ ಸಹ 295 ಸ್ಥಾನ ಬರೋದಂತೂ ಗ್ಯಾರಂಟಿ ಅಂತ ಹೇಳಿಕೊಂಡಿದೆ. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್ ಸುತ್ತ ಸೆಕ್ಷನ್ 144 ಜಾರಿ; ಡ್ರೋನ್ ಹಾರಾಟ, ಲೇಸರ್ ಲೈಟ್ ಚಟುವಟಿಕೆಗೂ ನಿಷೇಧ – ಕಾರಣ ಏನು?
ಅಲ್ಲದೇ ಮಂಗಳವಾರ ಸಂಭ್ರಮಾಚರಣೆಯ ರೂಪು-ರೇಷೆಗಳ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ನಿವಾಸದಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಿದೆ. ಅಷ್ಟೇ ಅಲ್ಲ, ಈಗಾಗಲೇ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಈಗಾಗಲೇ ಅನಧಿಕೃತವಾಗಿ ಸಿದ್ಧತೆಗಳನ್ನೂ ಆರಂಭಿಸಿದೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಪ್ರಧಾನಿ ಮೋದಿ ಮುಂದಿನ 125 ದಿನದ ಆಡಳಿತ ಹೇಗಿರಬೇಕೆಂಬ ಬಗ್ಗೆ ರೋಡ್ ಮ್ಯಾಪ್ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಪೂರಕವಾಗಿ ಭಾನುವಾರ (ಜೂ.2) ಸರಣಿ ಸಭೆಗಳನ್ನೂ ನಡೆಸಿದ್ದಾರೆ.
ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಆಧ್ಯಾತ್ಮಿಕ ಯಾತ್ರೆ ಮುಗಿಸಿದ ಮೋದಿಯವರು ತಮ್ಮಲ್ಲಿ ಈಗ ಅನಂತ ಶಕ್ತಿ ಪ್ರವಹಿಸುತ್ತಿದೆ, ಹೊಸ ಸಂಕಲ್ಪಗಳಿಗೆ ದಾರಿ ತೋರಿಸುತ್ತಿದೆ ಎಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ವಿಕಸಿತ ಭಾರತಕ್ಕಾಗಿ ಮುಂದಿನ 25 ವರ್ಷ ಕಷ್ಟ ಪಡೋಣ ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಈ ಮೂಲಕ ತಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುವ ಅದಮ್ಯ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ
ಲೋಕಸಮರ ಗೆದ್ದರೇ ಮೋದಿಯ ಕಾರ್ಯಸೂಚಿ ಹೀಗಿದೆ..
* ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿ
* ಒಂದು ದೇಶ ಒಂದು ಚುನಾವಣೆ ಪದ್ದತಿ ಜಾರಿ
* ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯುವ ನಿಟ್ಟಿನಲ್ಲಿ ಕಾರ್ಯ
* ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ಗೆ ಏರಿಕೆ ಮಾಡುವ ಗುರಿ
* ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡುವ ಗುರಿ
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಪಡೆಯಲು ಒತ್ತು
* ದೇಶದ ಪ್ರಮುಖ ಪಾರಂಪರಿಕ ಧಾರ್ಮಿಕ ಕೇಂದ್ರಗಳ ಪುನರುತ್ಥಾನ
* ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್-ಡೀಸೆಲ್ ತರುವುದು
* ಸೋರಿಕೆ ತಡೆಗೆ ರಾಜ್ಯಗಳ ಹಣಕಾಸು ಸ್ವಾಯತ್ತತೆ ಮೇಲೆ ನಿಯಂತ್ರಣ