ನವದೆಹಲಿ: ದೇಶದಲ್ಲಿ ಈಗಗಾಲೇ 5 ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಚಾಲನೆ ನೀಡಲಾಗಿದೆ. 2025-26ಕ್ಕೆ ಭಾರತಕ್ಕೆ ತಿರುವುಗಳಲ್ಲಿ ಮೋಟಾರ್ ಬೈಕ್‌ನಂತೆ ವಾಲುವ ಲಿಟ್ಟಿಂಗ್ ರೈಲು ಬರಲಿದೆ. ಲಿಟ್ಟಿಂಗ್ ರೈಲು ಬಂದ ನಂತರ 100 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಈ ತಂತ್ರಜ್ಞಾನ ಅಳವಡಿಸುವ ಯೋಜನೆಯನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ.
Advertisement
ಈ ಬೆನ್ನಲ್ಲೇ ಮುಂಬರುವ 2023ರ ಕೇಂದ್ರ ಬಜೆಟ್‌ನಲ್ಲಿ (Union Budget 2023) ಭಾರತೀಯ ರೈಲ್ವೆಗೆ ಅತಿ ಹೆಚ್ಚು ಬಜೆಟ್ ಹಂಚಿಕೆ ಮಾಡಲಿದ್ದು, ಸುಮಾರು 300 ರಿಂದ 400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಕ್ಕಳ ಜೊತೆ ಅಸಭ್ಯ ವರ್ತನೆ – ಕ್ಯಾಬ್ ಚಾಲಕನನ್ನು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ ಗ್ರಾಮಸ್ಥರು
Advertisement
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw), 2024ರ ಮೊದಲ ತ್ರೈಮಾಸಿಕದಲ್ಲಿ ಸ್ಲೀಪರ್ ಕೋಚ್‌ಗಳೊಂದಿಗೆ ಮೊದಲ ವಂದೇ ಭಾರತ್ ರೈಲನ್ನು ಹೊರತರಲಾಗುವುದು ಎಂದು ತಿಳಿಸಿದ್ದಾರೆ.
Advertisement
Advertisement
ಭಾರತವು ಮುಂದಿನ 3 ವರ್ಷಗಳಲ್ಲಿ 475 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುವ ಯೋಜನೆಯ ಹಾದಿಯಲ್ಲಿದೆ. ಕಳೆದ ಬಜೆಟ್‌ನಲ್ಲಿ 400 ರೈಲುಗಳನ್ನು ಮಂಜೂರು ಮಾಡಲಾಗಿತ್ತು. ಅದಕ್ಕೂ ಮೊದಲು 75 ರೈಲುಗಳನ್ನು ಮಂಜೂರು ಮಾಡಲಾಗಿತ್ತು. ಮುಂದಿನ 3 ವರ್ಷಗಳಲ್ಲಿ ಇದರ ಸಂಪೂರ್ಣ ಗುರಿ ಸಾಧಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: GPS ಟ್ರ್ಯಾಕರ್ ಬಳಸಿ ಉದ್ಯಮಿಯಿಂದ 50 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳರ ಬಂಧನ
ಇದರೊಂದಿಗೆ ದೆಹಲಿ-ಮುಂಬೈ, ದೆಹಲಿ-ಹೌರಾ ಮತ್ತು ಇತರ ಪ್ರಮುಖ ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ರಾಜಧಾನಿ ಮತ್ತು ಡುರೊಂಟೊ (Duronto Trains) ರೈಲುಗಳನ್ನು ಬದಲಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಮುಖ್ಯವಾಗಿ 2025-26ರ ವೇಳೆಗೆ ಭಾರತೀಯ ರೈಲ್ವೆಯು ಯೂರೋಪ್, ದಕ್ಷಿಣ ಅಮೆರಿಕ ಮತ್ತು ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ (International Market) ವಂದೇ ಭಾರತ್ ರೈಲುಗಳ ಪ್ರಮುಖ ರಫ್ತುದಾರನಾಗಲು ಯೋಜಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.