-ಕಳ್ಳತನ ಮಾಡಿದ ಕೂದಲನ್ನು ಚೀನಾ, ಬರ್ಮಾ ಮತ್ತು ಹಾಂಕಾಂಗ್‌ಗೆ ರಫ್ತು
ಬೆಂಗಳೂರು: ಸಾಮಾನ್ಯವಾಗಿ ಚಿನ್ನ, ಬೆಳ್ಳಿ, ಬೈಕ್, ಕಾರು ಕಳ್ಳತನ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆಯರು ಬಾಚಿದ ತಲೆಕೂದಲನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ (Bengaluru) ಸೋಲದೇವನಹಳ್ಳಿಯ (Soladevanahalli) ಲಕ್ಷ್ಮೀಪುರ ಕ್ರಾಸ್‌ನಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಚಿನ್ನ, ಬೆಳ್ಳಿ, ಬೈಕ್, ಕಾರು ಕಳ್ಳತನ ಅಲ್ಲದೇ, ಮನೆ, ಬ್ಯಾಂಕ್ ದರೋಡೆ ಮಾಡಿ ಹಣ ಕಳ್ಳತನ ಮಾಡುವ ಸುದ್ದಿಯನ್ನು ಕೇಳುತ್ತಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಖದೀಮ, ಕದ್ದಿರೋದು ಮಹಿಳೆಯರ ತಲೆ ಕೂದಲು. ಹೌದು ಈ ಆಸಾಮಿ ಒಂದಲ್ಲ, ಎರಡಲ್ಲ ಬರೋಬ್ಬರಿ 400 ಕೆ.ಜಿ ಕೂದಲನ್ನು ಕಳ್ಳತನ ಮಾಡಿದ್ದಾನೆ.ಇದನ್ನೂ ಓದಿ: ರೀಲ್ಸ್‌ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ಹುಚ್ಚಾಟ – ಬಿಸಿ ಮುಟ್ಟಿಸಿದ ಪೊಲೀಸರು
ಮಾ.1 ರಂದು ಲಕ್ಷ್ಮೀಪುರ ಕ್ರಾಸ್‌ನ ಗೋದಾಮಿನಿಂದ ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡ ಗೋದಾಮಿನ ಬೀಗ ಮುರಿದು ಕೂದಲನ್ನು ಕದ್ದಿದ್ದರು. ಗೂಡ್ಸ್ ವಾಹನದ ಮೂಲಕ ಸುಮಾರು 25 ಲಕ್ಷ ರೂ. ಬೆಲೆಬಾಳುವ 400 ಕೆ.ಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ಗೋದಾಮಿನ ಮಾಲೀಕ ವೆಂಕಟರಮಣ ಕಳ್ಳತನ ಕುರಿತು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಕದ್ದ ಕೂದಲನ್ನು ಚನ್ನರಾಯಪಟ್ಟಣ ಹಾಗೂ ಆಂಧ್ರಗೆ ಸಾಗಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಕೂದಲನ್ನು ಚೀನಾ, ಬರ್ಮಾ ಮತ್ತು ಹಾಂಕಾಂಗ್‌ಗೆ ರಫ್ತು ಮಾಡಬೇಕಾಗಿತ್ತು ಎನ್ನೋದು ಗೊತ್ತಾಗಿದೆ.
ಸದ್ಯ ಐದು ಜನರ ಪೈಕಿ ಯಲ್ಲಪ್ಪ ಪೊಲೀಸರು ಬಲೆಗೆ ಬಿದ್ದಿದ್ದು, ಉಳಿದ ನಾಲ್ಕು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.ಇದನ್ನೂ ಓದಿ: Good Friday 2025: ಗುಡ್ ಫ್ರೈಡೇ ಕ್ರೈಸ್ತರ ಪವಿತ್ರ ದಿನ ಏಕೆ? ಇದರ ಇತಿಹಾಸ ನೀವೂ ತಿಳಿಯಿರಿ…