ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಹಿಮ್ಸ್ ಆಸ್ಪತ್ರೆಯಲ್ಲಿ ಬೆಡ್‍ಗಳೆಲ್ಲವೂ ಭರ್ತಿಯಾಗಿದ್ದು, ಈ ಹಿನ್ನೆಲೆ ಹಾಸಿಗೆ ಭರ್ತಿಯಾಗಿರುವ ಕುರಿತು ಆಡಳಿತ ಮಂಡಳಿ ಬೋರ್ಡ್ ಹಾಕಿದೆ.
ಎಲ್ಲ ಹಾಸಿಗೆಗಳು ಭರ್ತಿಯಾಗಿವೆ ಎಂದು ಆಡಳಿತ ಮಂಡಳಿ ಬೋರ್ಡ್ ಹಾಕಿದೆ. ಒಟ್ಟು 400 ಹಾಸಿಗಳಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ಎಲ್ಲ 400 ಹಾಸಿಗೆಗಳು ಭರ್ತಿಯಾಗಿವೆ. ತೀವ್ರ ನಿಗಾ ಘಟಕಗಳ ಹಾಸಿಗೆಗಳ ಸಂಖ್ಯೆ 60, ವೆಂಟಿಲೇಟರ್‍ಗಳ ಸಂಖ್ಯೆ 55 ಇದ್ದು, ಎಲ್ಲವೂ ಭರ್ತಿಯಾಗಿವೆ ಎಂದು ಬೋರ್ಡ್ ಹಾಕಲಾಗಿದೆ. ಐಸಿಯು, ವೆಂಟಿಲೇಟರ್ ಸೇರಿ ಎಲ್ಲ ಹಾಸಿಗೆಗಳು ಫುಲ್ ಆಗಿವೆ ಎಂದು ಆಡಳಿತ ಮಂಡಳಿ ಬೋರ್ಡ್ ಹಾಕಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆಘಾತ ಉಂಟಾಗಿದೆ.
ಹಾಸನದಲ್ಲಿ ನಿನ್ನೆ ಒಂದೇ ದಿನ 1,673 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 13 ಜನ ಸಾವನ್ನಪ್ಪಿದ್ದಾರೆ. ನಿತ್ಯ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಬೆಡ್‍ಗಳ ಕೊರತೆ ಉಂಟಾಗುತ್ತಿದೆ.