ರಾಮನಗರ: ಶಬರಿಮಲೆ (Sabarimala) ದೇಗುಲದ ಸ್ಕೈವಾಕ್ ಮೇಲಿಂದ ಬಿದ್ದು ಅಯ್ಯಪ್ಪ ಭಕ್ತರೊಬ್ಬರು (Ayyappa Devotee) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕನಕಪುರದ (Kanakapura) ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಆತ್ಮಹತ್ಯೆ ಮಾಡಿಕೊಂಡ ಭಕ್ತ. ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ದಿನದ ಹಿಂದೆ ಕುಮಾರ್ ಸೇರಿ 6 ಮಂದಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ದೇವಾಲಯದ ಸ್ಕೈವಾಕ್ ಶೆಲ್ಟರ್ ಮೇಲಿನಿಂದ ಜಿಗಿದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವಾಲಯದ ಮೇಲಿಂದ ಜಿಗಿಯುವ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಭಿಮಾನದಿಂದ ನಟರನ್ನು ನಂಬಿ ಯಾರೂ ಮೋಸಹೋಗಬೇಡಿ: ಎ6 ಜಗದೀಶ್ ತಾಯಿ ಕಣ್ಣೀರು
Advertisement
Advertisement
ಘಟನೆಯಲ್ಲಿ ಅಯ್ಯಪ್ಪ ಮಾಲಾಧಾರಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಕುಮಾರ್‌ಗೆ ಶಬರಿಮಲೆ ಸನ್ನಿಧಾನದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ರವಾನೆ ಮಾಡುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕುಮಾರ್ ಕುಟುಂಬಸ್ಥರು ಶಬರಿಮಲೆಗೆ ತೆರಳಿದ್ದಾರೆ.
Advertisement
ಇನ್ನೂ ಕುಮಾರ್ ಸಾವಿನ ಬಗ್ಗೆ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಸೋಮವಾರವಷ್ಟೇ ಪತಿ ಪೋನ್ ಮಾಡಿ ಮಾತನಾಡಿದ್ದರು. ಮನೆಯಲ್ಲೂ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ. ಸ್ನೇಹಿತರ ಜೊತೆ ದೇವಾಲಯಕ್ಕೆ ಹೋಗಿದ್ದವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸ್ನೇಹಿತರು ಅವರು ಒಬ್ಬರನ್ನೇ ಬಿಟ್ಟು ಎಲ್ಲಿಹೋಗಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ
Advertisement