ರಾಯಚೂರು: ಬೆಂಗಳೂರಿನ ಚಿಲುಮೆ ಸಂಸ್ಥೆ (Chilume) ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿ (Raichur) ಮತದಾರರ ಪಟ್ಟಿಯಲ್ಲಿ (Voters List) ಹೆಸರು ನಾಪತ್ತೆಯಾಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರಿನಲ್ಲಿ (Raichur) 40 ಸಾವಿರಕ್ಕೂ ಹೆಚ್ಚು ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ (BJP) ಶಾಸಕರಿಂದ ಗೋಲ್‌ಮಾಲ್ ನಡೆದಿದೆ ಅಂತ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಗಳು ದಾಖಲೆ ಹಿಡಿದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು
Advertisement
Advertisement
2020 ರಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ 2,36,710 ಮತದಾರರಿದ್ದರೆ, 2022 ರಲ್ಲಿ 2,38,000 ಮತದಾರರು ಇದ್ದಾರೆ. ಆದರೆ 2023ರ ಚುನಾವಣೆಗಾಗಿ (Elections) ಬಿಡುಗಡೆಯಾಗಿರುವ ಪರಿಷ್ಕೃತ ಮತದಾರರ ಕರಡು ಪ್ರತಿಯಲ್ಲಿ 2,13,000 ಮತದಾರರಿದ್ದಾರೆ. 16 ಸಾವಿರ ಹೊಸ ಮತದಾರನ್ನ ಸೇರ್ಪಡೆ ಮಾಡಲಾಗಿದೆ. ಆದ್ರೆ ಮೊದಲಿನಿಂದ ಇದ್ದ 40 ಸಾವಿರ ಮತದಾರರ ಹೆಸರನ್ನ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement
Advertisement
ಕರಡು ಮತದಾರರ ಪಟ್ಟಿಯಲ್ಲಿ ಗುರುತಿನ ಚೀಟಿ ಸಂಖ್ಯೆ ಇದ್ದರೂ ಹೆಸರು, ತಂದೆ ಹೆಸರು, ವಿಳಾಸ ಅಳಿಸಿ ಹಾಕಲಾಗಿದೆ, ವಿಳಾಸ ಬದಲಿಸಲಾಗಿದೆ. ಬಹಳಷ್ಟು ಮುಸ್ಲಿಂ ಮತದಾರರನ್ನ (Muslim Voters) ಪಟ್ಟಿಯಿಂದಲೇ ತೆಗೆದು ಹಾಕಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮತದಾರರ ಪಟ್ಟಿ (Voters List) ಪರಿಷ್ಕರಣೆಗೆ ಡಿಸೆಂಬರ್ 24ರ ವರೆಗೆ ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಡಾ.ರಜಾಕ್ ಉಸ್ತಾದ್ ಹಾಗೂ ಜಾವೀದ್ ಉಲ್ ಹಕ್ ಮನವಿ ಮಾಡಿದ್ದಾರೆ.
ರಾಯಚೂರು ನಗರ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರ ಹಿಂದೆ ಬಿಜೆಪಿ ಸರ್ಕಾರ ಹಾಗೂ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಕೈವಾಡವಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ಆರೋಪ- ಗ್ರಾಮಸ್ಥರಿಂದ ದೂರು
ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಮತದಾರರನ್ನ ಕೈಬಿಟ್ಟಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿರುತ್ತೆ. ಬಿಎಲ್‌ಓ ಗಳು ಮನೆ ಮನೆಗೆ ತೆರಳಿ ಮೃತಪಟ್ಟವರ ಮಾಹಿತಿ ಪಡೆದು ಡಿಲಿಟ್ ಮಾಡಿರುತ್ತಾರೆ. ಜೊತೆಗೆ 18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ನಡೆದಿದೆ. ವೋಟರ್ಸ್ ಡ್ರಾಫ್ಟ್ ರೋಲನ್ನ ಪಕ್ಷಗಳಿಗೆ ನೀಡುತ್ತೇವೆ. ಡಿಲಿಟ್ ಆಗಿರೋ ಮತದಾರರ ಮಾಹಿತಿ ನೀಡಿದರೆ ಸೇರ್ಪಡೆ ಮಾಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಯಾವುದೇ ಒತ್ತಡದಿಂದ ಮತದಾರರ ಪಟ್ಟಿ ಡಿಲಿಟ್ ಮಾಡಿಲ್ಲ ಅಂತಾ ಹೇಳಿದ್ದಾರೆ.
ಬಿಜೆಪಿಗೆ ಮತ ಹಾಕದಿರುವ ಸಮುದಾಯ ಮತ್ತು ವ್ಯಕ್ತಿಗಳನ್ನ ಗುರುತಿಸಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಅನ್ನೋ ಆರೋಪವೇ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಇಂತಹ ಕೃತ್ಯದಲ್ಲಿ ಭಾಗಿಯಾಗಿರದಿದ್ದರೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಬೆಳಕಿಗೆ ತರಲಿ ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.