ಡೆಹ್ರಾಡೂನ್: ಕೈಲಾಸ ಮಾನಸ ಸರೋವರ ರಸ್ತೆ ಬಂದ್ ಆಗಿದ್ದರಿಂದ, ಬುಂದಿ ಗ್ರಾಮದಲ್ಲಿ ಸಿಲುಕಿದ್ದ 40 ಯಾತ್ರಾರ್ಥಿಗಳನ್ನು ಉತ್ತರಖಂಡ ಸರ್ಕಾರ ಭಾನುವಾರ ರಕ್ಷಿಸಿದೆ.
ಕೈಲಾಸ ಯಾತ್ರೆಯ ಮಾರ್ಗದಲ್ಲಿ ದೊಡ್ಡ ಬಂಡೆಗಳು ಬಿದ್ದಿರುವುದರಿಂದ ರಸ್ತೆಯನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಕೈಲಾಸ ಯಾತ್ರೆಗೆಂದು ಹೋಗಿದ್ದ 40 ಯಾತ್ರಾರ್ಥಿಗಳನ್ನು ಹೆಲಿಕಾಪ್ಟರ್ ಬಳಸಿ ಧಾರ್ಚುಲಾಗೆ ಕರೆತರಲಾಯಿತು. ಎಲ್ಲಾ ಯಾತ್ರಾರ್ಥಿಗಳನ್ನು 8 ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.
ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಕನ್ವರ್ ಯಾತ್ರೆ ಆರಂಭವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಶಾಸಕರ ಕಾರನ್ನೇ ಎಗರಿಸಿ ಖತರ್ನಾಕ್ ಕಳ್ಳರು
ಯಾತ್ರಾರ್ಥಿಗಳಿಗೆ ಕೈಲಾಸ ಪರ್ವತ ತೆರಳಲು ಎರಡು ಮಾರ್ಗಗಳಿದೆ. ಅದರಲ್ಲಿ ಒಂದು ಉತ್ತರಾಖಂಡದ ಲಿಪುಲೇಖ್ ಪಾಸ್ ಹಾಗೂ ಇನ್ನೊಂದು ಸಿಕ್ಕಿಂನ ನಾಥು ಲಾ ಪಾಸ್ ಆಗಿದೆ. ಗಡಿಯೊಳಗೆ ಬಂದ ಪಾಕಿಸ್ತಾನದ ಡ್ರೋನ್ ಓಡಿಸಿದ ಭದ್ರತಾ ಪಡೆ