ಬೆಂಗಳೂರು: ಬಿಜೆಪಿ (BJP) ಮೇಲೆ ಗುತ್ತಿಗೆದಾರರು (Contractor) ಮಾಡಿದ 40% ಆರೋಪ ಸತ್ಯ. ಕಾಂಗ್ರೆಸ್ (Congress) ಮೇಲೆ ಮಾಡುತ್ತಿರುವ 15% ಕಮೀಷನ್ ಆರೋಪ ಸುಳ್ಳು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿಸಿಎಂ ವಿರುದ್ಧದ ಕಮಿಷನ್ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಬಿಎಂಪಿಯಲ್ಲಿ (BBMP) ಆಗಿರುವ ಕಾಮಗಾರಿಗಳ ಬಗ್ಗೆ ತನಿಖೆ ಮಾಡಲು 4 ತಂಡಗಳನ್ನು ರಚನೆ ಮಾಡಲಾಗಿದೆ. ಸಮಿತಿ ವರದಿ ಕೊಟ್ಟ ಮೇಲೆ ಬಿಲ್ ಕ್ಲಿಯರ್ ಆಗುತ್ತೆ. ಇನ್ನೂ ಸಮಿತಿ ವರದಿಯನ್ನು ಕೊಟ್ಟಿಲ್ಲ. ಆಗಲೇ ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: BJP ಸಂಸದರಿಗೆ ರಾಗಾ ಫ್ಲೈಯಿಂಗ್ ಕಿಸ್ – ಅದು ಪ್ರೀತಿಯ ಸನ್ನೆ ಎಂದು ಶಿವಸೇನೆ ಸಂಸದೆ ಸಮರ್ಥನೆ
Advertisement
Advertisement
ಬಿಲ್ ಬೇಗ ಬಿಡುಗಡೆ ಮಾಡಬೇಕು ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ. ಬಿಜೆಪಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಕೆಲಸವೇ ಆಗಿಲ್ಲ, ಬಿಲ್ ಎಲ್ಲಿ ಕೋಡೋಣ. ಇದರ ತನಿಖೆಗೆ ತಂಡ ರಚನೆ ಮಾಡಿದ್ದೇವೆ. ತನಿಖೆಯ ವರದಿ ಬರಲಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪೇಸಿಎಂಗೆ ಬಿಜೆಪಿ ಪೇಸಿಎಸ್ ತಿರುಗೇಟು- ಚಲುವರಾಯಸ್ವಾಮಿ ವಿರುದ್ಧ ಕ್ಯೂಆರ್ ಕೋಡ್
Advertisement
ಬಿಜೆಪಿ ಅವಧಿಯಲ್ಲಿ 40% ಕಮಿಷನ್ ಪಡೆದಿದ್ದರು. ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಇವರು ಕಳೆದುಕೊಂಡಿದ್ದಾರೆ. ಬಿಜೆಪಿ ಅವರ ಮಾತಿಗೆ ಕಿಮ್ಮತ್ತಿಲ್ಲ. ಬಿಜೆಪಿ ಅವರಿಗೆ ವಿರೋಧ ಪಕ್ಷದಲ್ಲಿ ಇರಲು ಜನ ಆದೇಶ ಮಾಡಿದ್ದಾರೆ. ನಾಲ್ಕು ಮುಕ್ಕಾಲು ವರ್ಷ ಅವರು ವಿಪಕ್ಷದಲ್ಲೇ ಇರಲಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಕ್ರೋಮ್, ಫೈರ್‌ಫಾಕ್ಸ್, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ
Advertisement
ಗುತ್ತಿಗೆದಾರರಿಗೆ ಬಿಲ್ ಬಾಕಿ ಇರೋದು ಸತ್ಯ. ಬಿಜೆಪಿ ಅವರು ಮಾಡಿದ ಸಾಲದಿಂದ ಇಷ್ಟು ಬಿಲ್ ಬಾಕಿ ಉಳಿದುಕೊಂಡಿದೆ. ಆದರೆ ಯಾರೂ ಕಮಿಷನ್ ಕೇಳಿಲ್ಲ. ಬಿಜೆಪಿಯವರ ಮೇಲೆ 40% ಕಮಿಷನ್ ಆರೋಪ ಸತ್ಯ. ಆದರೆ ನಮ್ಮ ಮೇಲೆ 15% ಕಮಿಷನ್ ಆರೋಪ ಸುಳ್ಳು ಎಂದು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿದರು. ಇದನ್ನೂ ಓದಿ: ನಾವು ಕಾಶ್ಮೀರಿಗಳೊಂದಿಗೆ ಮಾತನಾಡುತ್ತೇವೆ ಹೊರತು ಪಾಕಿಸ್ತಾನಿಗಳೊಂದಿಗಲ್ಲ: ಅಮಿತ್ ಶಾ
Web Stories