ರಾಯಚೂರು: ಟಂಟಂ ಪಲ್ಟಿಯಾದ ಪರಿಣಾಮ ಚಿಕ್ಕಮಕ್ಕಳು ಸೇರಿ 40 ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಆನಂದಗಲ್ ಬಳಿ ನಡೆದಿದೆ.
ಗದ್ದೆ ನಾಟಿಯ ಕೂಲಿ ಕೆಲಸಕ್ಕೆ ತಪ್ಪಲದೊಡ್ಡಿ, ಕೋಟೆಕಲ್ ನಿಂದ ಕೂಲಿಕಾರರನ್ನ ಹಾಲಾಪುರಕ್ಕೆ ಕರೆದ್ಯೊಯ್ಯುತ್ತಿದ್ದಾಗ ಟಂಟಂ ಪಲ್ಟಿಯಾಗಿದೆ. ಬಾಲ ಕಾರ್ಮಿಕರನ್ನೂ ಚಿಕ್ಕ ವಾಹನದಲ್ಲಿ ಕುರಿಗಳನ್ನ ತುಂಬಿದಂತೆ ತುಂಬಿಕೊಂಡು ಕರೆದ್ಯೊಯ್ಯಲಾಗುತ್ತಿತ್ತು.
ಈ ವೇಳೆ ಟಂಟಂ ವೇಗವಾಗಿ ಹೋಗುತ್ತಿದ್ದು, ಸಿರವಾರ ತಾಲೂಕಿನ ಆನಂದಗಲ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ 40 ಜನರಿಗೆ ಗಾಯವಾಗಿದ್ದು, ಅವರಲ್ಲಿ 15 ಜನರ ಸ್ಥಿತಿ ಗಂಭೀರವಾಗಿದೆ. ಟಂಟಂ ವಾಹನದಲ್ಲಿ ಮಕ್ಕಳು ಸೇರಿದಂತೆ 40 ಮಂದಿ ಇದ್ದರು ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನ ಸಮೀಪದ ಲಿಂಗಸುಗೂರು ಮತ್ತು ಪಾಮನಕಲ್ಲೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಘಟನೆ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv