ಹುಬ್ಬಳ್ಳಿ: ಕಾಮಗಾರಿ ಬಿಲ್ ಆಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ಹುಬ್ಬಳ್ಳಿಯ (Hubballi) ಗುತ್ತಿಗೆದಾರನೊಬ್ಬ (Contractor) ದಯಾಮರಣ ಕೋರಿ ರಾಷ್ಟ್ರಪತಿಗೆ (President) ಅರ್ಜಿ ಬರೆದಿದ್ದಾರೆ.
ಗುತ್ತಿಗೆದಾರ ಎ.ಬಸವರಾಜ್ ಎಂಬಾತ ದಯಾಮರಣಕ್ಕಾಗಿ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಬಸವರಾಜ್ ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದರು.
Advertisement
Advertisement
2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿಗೆ 27 ಲಕ್ಷ ರೂ., ಕಡೂರು ತಾಲೂಕಿಗೆ 85 ಲಕ್ಷ ರೂ. ಪರಿಕರ ಪೂರೈಕೆ ಮಾಡಿದ್ದರು. ಸರಬರಾಜು ಮಾಡಿ 2 ವರ್ಷ ಗತಿಸಿದರೂ ಇನ್ನೂ ಬಿಲ್ ಪಾವತಿ ಆಗಿಲ್ಲ. ಬಿಲ್ ಪಾವತಿ ಮಾಡಲು EO ಕಮಿಷನ್ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದರು.
Advertisement
ಅಲ್ಲದೆ ಕಡೂರು ಬಿಜೆಪಿ (BJP) ಶಾಸಕ ಬೆಳ್ಳಿ ಪ್ರಕಾಶ ಹೆಸರಿನಲ್ಲಿ ಬಿಲ್‍ನ ಒಟ್ಟು 40 ಪರ್ಸೆಂಟೇಜ್‍ಗಿಂತ ಹೆಚ್ಚಿನ ಹಣಕ್ಕೆ ಕಡೂರು EO ದೇವರಾಜ್ ನಾಯಕ್ ಒತ್ತಾಯ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯದಿಂದ 4 ಬಾರಿ, ಮುಖ್ಯಮಂತ್ರಿ ಅವರ ಕಾರ್ಯಾಲಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯಾಧಿಕಾರಿ ನಿರ್ದೇಶನ ನೀಡಿದರೂ, ಬಿಲ್ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಅಂಬುಲೆನ್ಸ್‌ನ ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
Advertisement
ಮತ್ತೊಂದು ಕಡೆ ಬಸವರಾಜ್‍ಗೆ ಸಾಲಗಾರರ ಕಾಟ ಸಹ ಹೆಚ್ಚಾಗಿದೆ. ಇದರಿಂದ ಮಾನಸಿಕವಾಗಿ ನೊಂದ ಗುತ್ತಿಗೆದಾರನಿಂದ ದಯಾಮರಣ ಕೋರಿ ಅರ್ಜಿ ಹಾಕಿದ್ದು, ಅರ್ಜಿ ಜೊತೆಗೆ ಕಾಮಗಾರಿಯ ಎಲ್ಲಾ ದಾಖಲೆ ಮತ್ತು ಪರ್ಸೆಂಟೇಜ್‍ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾರ್ಡ್ ಅನ್ನು ರಿಜಿಸ್ಟರ್ ಪೋಸ್ಟ್ ಮಾಡಲಾಗಿದೆ ಎಂದು ಬಸವರಾಜ್ ತಿಳಿಸಿದರು. ಇದನ್ನೂ ಓದಿ: BJPಯಂತೆ ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ – HDK