ವಿಜಯಪುರ: ಮೊಬೈಲ್‌ಗಳಲ್ಲಿ ಕ್ಲೌಡ್ ಮಾರಾಟ ಮಾಡುವ ಕಂಪನಿ ಹೆಸರಿನಲ್ಲಿ ಸರ್ಕಾರಿ ನೌಕರ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ರವೀಂದ್ರ ಬೆಳ್ಳಿ ಎಂದು ಗುರುತಿಸಲಾಗಿದ್ದು, ನಗರದ ಹೊರವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಸ್ತೀರ್ಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದನ್ನೂ ಓದಿ:8ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ: ಯಶ್‌ಗೆ ರಾಧಿಕಾ ಲವ್ಲಿ ವಿಶ್
ದಿ ಬ್ಯಾಂಕ್ ಎಂಬ ಕಂಪನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡುವುದಾಗಿ ಬಸವರಾಜ ಜಿರಾಳೆ ಎಂಬುವವರಿಗೆ 40 ಲಕ್ಷ ರೂ. ಹಣ ವಂಚನೆ ಮಾಡಿದ್ದಾರೆ. ಈ ಕುರಿತು ಬಸವರಾಜ ಜಿರಾಳೆ ಅ.17 ರಂದು ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರವೀಂದ್ರ ಬೆಳ್ಳಿ ಎ1 ಆರೋಪಿಯಾಗಿದ್ದು, ಒಟ್ಟು 7 ಜನರ ಮೇಲೆ ದೂರು ದಾಖಲಿಸಿದ್ದಾರೆ.
ದಿ ಬ್ಯಾಂಕ್ ಎಂಬ ಕಂಪನಿ ಮೊಬೈಲ್ ಸ್ಟೋರೇಜ್‌ಗಾಗಿ ಕ್ಲೌಡ್ ಸೇಲ್ಸ್ ಮಾಡುತ್ತದೆ. ಇದೊಂದು ಚೈನ್ ಸಿಸ್ಟಮ್ ವ್ಯಾಪಾರವಾಗಿದ್ದು, ದೂರುದಾರರಿಂದ 40 ಲಕ್ಷ ರೂ.ಗಳನ್ನು ಹೂಡಿಕೆಗಾಗಿ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ರವೀಂದ್ರ ಬೆಳ್ಳಿ ಅವರ ಬಳಿ ಕೇಳಿದರೆ ನಾನು ದಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದು ನಿಜ. ನಾನೂ ಇದರಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಬಸವರಾಜ ಅವರಿಂದ ಯಾವುದೇ ಹಣ ಪಡೆದಿಲ್ಲ. ಅವರು ನನಗೂ ಹಣ ಮರಳಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ.
ಈಗಾಗಲೇ ರವೀಂದ್ರ ಅವರ ಮೇಲೆ ಎಫ್‌ಐಆರ್ ದಾಖಲಾಗಿ ಎರಡು ತಿಂಗಳುಗಳು ಕಳೆದಿದೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಎಫ್‌ಐಆರ್ ದಾಖಲಾದರೂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಇದರ ಹಿಂದೆಯೂ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂದು ಅನುಮಾನ ವ್ಯಕ್ತವಾಗಿದೆ. ಈ ಪ್ರಕರಣದ ತನಿಖೆ ನಡೆಸಿದರೆ ಮತ್ತಷ್ಟು ಸರ್ಕಾರಿ ನೌಕರರ ಕರಾಳ ದಂಧೆ ಹೊರಬೀಳಬಹುದು ಎನ್ನಲಾಗುತ್ತಿದೆ.ಇದನ್ನೂ ಓದಿ: ಬಾಂಗ್ಲಾದೇಶದವರಿಗೂ ರಾಜ್ಯದಲ್ಲಿ BPL ಕಾರ್ಡ್ ಕೊಡಲಾಗಿದೆ: ಸಿ.ಟಿ ರವಿ