ಅಲಹಾಬಾದ್: 12 ಅಡಿ ಉದ್ದದ ಹೆಬ್ಬಾವೊಂದು ಕಾಲೇಜು ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಬುಧವಾರದಂದು ಉತ್ತರಪ್ರದೇಶದ ಅಲಹಾಬಾದ್‍ನಲ್ಲಿ ನಡೆದಿದೆ.
Advertisement
ಇಲ್ಲಿನ ಶ್ಯಾಮ ಪ್ರಸಾದ್ ಮುಖರ್ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಾವು ಕಾಣಿಸಿಕೊಂಡಿತ್ತು. ಆಶ್ಚರ್ಯವೆಂಬಂತೆ ಕಾಲೇಜಿನ ಪ್ರಾಧ್ಯಾಪಕರೇ ಈ 40 ಕೆಜಿ ತೂಕದ ಹಾವನ್ನ ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
Advertisement
Advertisement
ಹಾವನ್ನ ರಕ್ಷಿಸಿದ ಪ್ರಾಧ್ಯಾಪಕರಾದ ಎನ್‍ಬಿ ಸಿಂಗ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಬಾಗದ ಪ್ರಾಧ್ಯಾಪಕರಾಗಿದ್ದಾರೆ. ವಿದ್ಯಾರ್ಥಿಯೊಬ್ಬರಿಂದ ಕರೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಎನ್‍ಬಿ ಸಿಂಗ್ ಸ್ಥಳಕ್ಕೆ ಹೋಗಿ ಹಾವನ್ನ ಬರಿಗೈಯಲ್ಲೇ ಹಿಡಿದು ರಕ್ಷಣೆ ಮಾಡಿದ್ದಾರೆ. ಇದರ ವಿಡಿಯೋ ಸದ್ಯ ವೈರಲ್ ಆಗಿದೆ.
Advertisement
ಈವರೆಗೆ ಸಿಂಗ್ ಅವರು ಒಂದು ಡಜನ್‍ಗೂ ಹೆಚ್ಚು ಹಾವುಗಳನ್ನ ರಕ್ಷಣೆ ಮಾಡಿದ್ದಾರೆ. ಅವರ ಪ್ರಕಾರ ಹೆಬ್ಬಾವುಗಳನ್ನ ಕೆಣಕದಿದ್ದರೆ ಅವು ಯಾವುದೇ ಅಪಾಯ ಮಾಡುವುದಿಲ್ಲ. ಹಾವುಗಳು ಸುರಕ್ಷಿತ ಜಾಗವನ್ನು ಹುಡುಕಿಕೊಳ್ಳಲು ನೆರವಾಗುವ ಸಲುವಾಗಿ ಅವುಗಳನ್ನ ರಕ್ಷಣೆ ಮಾಡೋದಾಗಿ ಹೇಳಿದ್ದಾರೆ.