ಮುಂಬೈ: ಎಮಿರೇಟ್ಸ್ ವಿಮಾನಕ್ಕೆ (Emirates Aircraft) ಡಿಕ್ಕಿ ಹೊಡೆದು 40 ರಾಜಹಂಸ (Flamingos) ಹಕ್ಕಿಗಳು ಮುಂಬೈನ ಉಪನಗರವಾದ ಘಾಟ್‌ಕೋಪರ್‌ನಲ್ಲಿ ಸಾವಿಗೀಡಾಗಿವೆ. ಮೃತ ಹಕ್ಕಿಗಳು ವಿವಿಧ ಪ್ರದೇಶಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಇಳಿಯುವ ಕೆಲವೇ ಕ್ಷಣಗಳ ಮೊದಲು ವಿಮಾನವು ಹಕ್ಕಿ ಹಿಂಡುಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ದುಬೈಗೆ ತೆರಳಬೇಕಿದ್ದ ವಿಮಾನವು ನಿನ್ನೆ (ಸೋಮವಾರ) ರದ್ದುಗೊಂಡಿದೆ. ಇದನ್ನೂ ಓದಿ: ಅಮಿತ್ ಶಾ ಇನ್ನೂ ಪ್ರಧಾನಿಯಾಗಿಲ್ಲ ಆಗಲೇ ದುರಹಂಕಾರಿಯಾಗಿದ್ದಾರೆ: ಕೇಜ್ರಿವಾಲ್ ವಾಗ್ದಾಳಿ
ಘಾಟ್ಕೋಪರ್ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಪಕ್ಷಿಗಳ ಬಗ್ಗೆ ಸ್ಥಳೀಯ ನಿವಾಸಿಗಳು, ವನ್ಯಜೀವಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.
ಪಕ್ಷಿಗಳ ಮೃತದೇಹಗಳು ಬಿದ್ದಿದ್ದ ಪ್ರದೇಶಗಳಿಗೆ ತೆರಳಿ ಅಧಿಕಾರಿಗಳು ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ರೆಕ್ಕೆಗಳು, ಉಗುರು, ಕೊಕ್ಕುಗಳ ಮುರಿದ ತುಂಡುಗಳು ಅಲ್ಲಲ್ಲಿ ಬಿದ್ದಿದ್ದವು. ಇದನ್ನೂ ಓದಿ: ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ
ಹಕ್ಕಿಗಳ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೆಸ್ಕಿಂಕ್ ಅಸೋಸಿಯೇಷನ್ ಫಾರ್ ವೈಲ್ಡ್ಲೈಫ್ ವೆಲ್ಫೇರ್ (RAWW) ಸಂಸ್ಥಾಪಕ ಪವನ್ ಶರ್ಮಾ ಹೇಳಿದ್ದಾರೆ.