ಚಿಕ್ಕಬಳ್ಳಾಪುರ: 40% ಕಮಿಷನ್ ರಾಜ್ಯ ಸರ್ಕಾರದ ಬಹುದೊಡ್ಡ ಸಾಧನೆ ಎಂದು ಟೀಕಿಸಿ, ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಬಿಜೆಪಿ ಸಾಧನಾ ಸಮಾವೇಶದ ವಿರುದ್ಧ ಕಾಂಗ್ರೆಸ್ ನಾಯಕರು ಕೆಂಡಕಾರಿದ್ದಾರೆ
Advertisement
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ ಹಾಗೂ ವಿ.ಎಸ್ ಉಗ್ರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾತನಾಡಿ, ಅದು ಸಾಧನಾ ಸಮಾವೇಶ ಅಲ್ಲ ಅದು ಶೂನ್ಯ ಸಮಾವೇಶ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಚಿವ ಜೆ.ಸಿ ಮಾಧುಸ್ವಾಮಿಗೆ ಆನೆಯಿಂದ ಮಾಲಾರ್ಪಣೆ
Advertisement
Advertisement
ಉಗ್ರಪ್ಪ ಮಾತನಾಡಿ, ಕಳೆದ 1 ವರ್ಷದಲ್ಲಿ ಯಾವ ಸಾಧನೆ ರಾಜ್ಯ ಸರ್ಕಾರ ಮಾಡಿದೆ ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು. 40% ಕಮಿಷನ್ ಪಡೆಯೋದು ರಾಜ್ಯ ಸರ್ಕಾರದ ಬಹು ದೊಡ್ಡ ಸಾಧನೆ. ರೈತರು, ನಿರುದ್ಯೋಗಿಗಳು, ಮೂಲಭೂತ ಸೌಲಭ್ಯಗಳು, ಸಮಾಜದ ಯಾವ ವರ್ಗಕ್ಕೆ ಏನು ಮಾಡಿದ್ದಾರೆ? ಏನಾದ್ರೂ ಸಾಧನೆಗಳನ್ನು ಮಾಡಿದ್ರೇ ಅದನ್ನು ವೈಭವೀಕರಿಸಿಕೊಳ್ಳಲಿ. ರಾಜ್ಯ ಸರ್ಕಾರದಿಂದ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಅದೇ ಅವರ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ನಾ ಖಾವುಂಗಾ ನಾ ಖಾನೆ ದುಂಗಾ ಅಂತೀರಲ್ಲ ನಾಚಿಕೆ ಅಗಲ್ವಾ ಪ್ರಧಾನ ಮಂತ್ರಿ ಮೋದಿಗೆ. ರಾಜ್ಯದಲ್ಲಿ ಪಿಎಸ್‍ಐ ಹಗರಣದಿಂದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರದಿಂದ ಯಾರು ಹಗರಣದ ನೈತಿಕ ಜವಾಬ್ದಾರಿ ಹೊಣೆ ಹೊತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೆನಡಾ ಬಳಿಕ ಪಂಜಾಬ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ