ಬೆಂಗಳೂರು: ಗುತ್ತಿಗೆದಾರರಿಂದ 40% ಕಮಿಷನ್ (40% Commission) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಾರದಲ್ಲಿ ವಿಚಾರಣಾ ಆಯೋಗ ತನಿಖೆ ಮುಗಿಯದಿದ್ದಲ್ಲಿ 100% ಬಿಲ್ ಮಂಜೂರಿಗೆ ಆದೇಶ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಇಂದು ಹೈಕೋರ್ಟ್‍ನ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೀತು. ಈ ವೇಳೆ ಫೆ. 6ರೊಳಗೆ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು. 45 ದಿನ ಆದರೂ ತನಿಖೆ ಯಾಕೆ ನಡೆಸಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ (Highcourt) ಪ್ರಶ್ನೆ ಮಾಡಿತು.
Advertisement
Advertisement
ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಗುತ್ತಿಗೆಯ 75% ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ, ಆದರೂ ಹಣ ಬಿಡುಗಡೆ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಂತ ಹಣ ತಡೆ ಹಿಡಿದಿಲ್ಲ, ಕೆಲವು ವಿಚಾರ ಕೇಳಿ ನಮಗೆ ಆಘಾತವಾಗಿದೆ. ಆ ವಿಚಾರಗಳನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಜ.3 ರಂದು ಆಯೋಗಕ್ಕೆ 45 ಕಾಮಗಾರಿಗಳ ದಾಖಲೆ ನೀಡಲಾಗಿದೆ ಎಂದು ಹೈಕೋರ್ಟ್ ಗೆ ತಿಳಿಸಿದರು.
Advertisement
ಈ ವೇಳೆ ಜಡ್ಜ್, ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ಆಗಿದೆ ಎಂದು ಹಣ ಬಿಡುಗಡೆ ಮಾಡಿಲ್ವಾ?. ವಿಚಾರಣೆಗಾಗಿ ರಚಿಸಿರುವ ಏಕಸದಸ್ಯ ಆಯೋಗಕ್ಕೆ ಮಾಹಿತಿ ನೀಡಿ. ಕೆಲಸ ಮಾಡಿಸಿಕೊಂಡು ಹಣ ನೀಡಲು ಏಕೆ ಸಮಸ್ಯೆ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ
Advertisement
ಸರ್ಕಾರದ ವಿಳಂಬ ನೀತಿಗೆ ನ್ಯಾ.ಎಂ. ನಾಗಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಆಯೋಗದ ವಿಚಾರಣೆ ಪೂರ್ಣಗೊಳಿಸಲು 45 ಸಾಕಾಗುವುದಿಲ್ಲವೇ..?, ಫೆ. 6 ರೊಳಗೆ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು. ಆಯೋಗಕ್ಕೆ ದಾಖಲೆ ಒದಗಿಸಲು ಅಧಿಕಾರಿಗಳು ತಡ ಮಾಡಿದ್ದೇಕೆ ಎಂದು ಪ್ರಶ್ನಿಸಿದರು. ಜೊತೆಗೆ ಬಿಬಿಎಂಪಿ ಎಂಜಿನಿಯರ್ ಇನ್ ಚೀಫ್ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು. ಕೆಲಸ ಮಾಡದ ಅಧಿಕಾರಿಗಳನ್ನು ಬದಲಾಯಿಸಿ. ಕಾಮಗಾರಿ ಮಾಡದೇ ಬಿಲ್ ಕೇಳಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಪೀಠ ಆರು ತಿಂಗಳುಗಳಿಂದ ಯಾಕೆ ತನಿಖೆ ಮಾಡಿಲ್ಲ. ಬೇಗ ತನಿಖೆ ಮಾಡಿ. 45 ದಿನಗಳಲ್ಲಿ ಏನು ಮಾಡಿಲ್ಲ. ನಿಮಗೆ ಇದರ ಬಗ್ಗೆ ಉತ್ಸಾಹ ಇಲ್ಲ ಅನಿಸ್ತಾ ಇದೆ. 6 ವಾರದಲ್ಲಿ ವಿಚಾರಣಾ ಆಯೋಗ ತನಿಖೆ ಮುಗಿಯದಿದ್ದಲ್ಲಿ 100% ಬಿಲ್ ಮಂಜೂರಿಗೆ ಆದೇಶ ಮಾಡಬೇಕಾಗುತ್ತದೆ ಹೈಕೋರ್ಟ್ ಎಚ್ಚರಿಕೆ ನೀಡಿತು.