– ‘ಕ್ಯಾಚ್ ಮಿ ಆ್ಯಂಡ್ ರೇಪ್ ಮಿ’, ಆಟದ ಒಂದು ಭಾಗವೆಂದ ಸಿಂಗರ್
ಲಂಡನ್: ನಾಲ್ಕು ಮಹಿಳೆಯರನ್ನು ಅತ್ಯಾಚಾರ ಮಾಡಿದಕ್ಕೆ ಇಂಗ್ಲೆಂಡ್ನ ರ್ಯಾಪ್ ಸಿಂಗರ್ ಗೆ ಬ್ರಿಟಿಷ್ ಕೋರ್ಟ್ 24 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲಂಡನ್ ನಗರದಲ್ಲಿ ಸೋಲೋ-45 ಎಂಬ ರ್ಯಾಪ್ ಕಾರ್ಯಕ್ರಮದ ಮೂಲಕ ಸಾಕಷ್ಟು ಹೆಸರು ಮಾಡಿದ್ದ ರ್ಯಾಪ್ ಸಿಂಗರ್ 33 ವರ್ಷದ ಆಂಡಿ ಅನೋಕ್ಯೆ ಶಿಕ್ಷಗೆ ಒಳಗಾದ ಅಪರಾಧಿ. ಈತ 21 ರೇಪ್ಗಳನ್ನು ಮಾಡಿದ್ದು, ಇತ್ತೀಚೆಗೆ ನಾಲ್ಕು ಮಹಿಳೆಯರನ್ನು ರೇಪ್ ಮಾಡಿ ಅವರ ಮೇಲೆ ಹಲ್ಲೆ ಮಾಡಿ ವಿಚಿತ್ರವಾಗಿ ಆಡುತ್ತಿದ್ದ ಎಂದು ಹೇಳಲಾಗಿದೆ.
Advertisement
Advertisement
ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಲಿಯಂ ಹಾರ್ಟ್ ಶಿಕ್ಷೆ ನೀಡುವ ಸಮಯದಲ್ಲಿ ರ್ಯಾಪರ್ ಅನೋಕ್ಯೆ “ವಿಕೃತ ಆನಂದಕ್ಕೆ” ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ. ಜೊತೆಗೆ ಈತ ನಮ್ಮ ದೇಶದಲ್ಲಿ ಜನಪ್ರಿಯವಾದ ಕಾರಣ ಇತರರು ಈತನನ್ನು ಅನುಸರಿಸುತ್ತಾರೆ. ಜೊತೆಗೆ ಈತ ಒಳ್ಳೆಯ ಸಾಧನೆಯನ್ನು ಮಾಡಿದ್ದಾನೆ. ಆತನ ಸಾಧನೆಯನ್ನು ಹೊರತು ಪಡಿಸಿ ಆತ ಖಾಸಗಿ ಜೀವನದಲ್ಲಿ ಮಾಡಿದ ಕೃತ್ಯಕ್ಕೆ 24 ವರ್ಷ ಶಿಕ್ಷೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಆತನ ನನ್ನ ಎಳೆದುಕೊಂಡು ಹೋಗಿ ಬೆಡ್ ಮೇಲೆ ಮಲಗಿಸಿ. ನನ್ನ ಮುಖದ ಮೇಲೆ ಗಾಜಿನ ಪ್ಯಾನೆಲ್ ಇಟ್ಟು ಅದರೊಳಗೆ ನೀರು ಹಾಕಿದ. ಆ ವೇಳೆ ನನಗೆ ನಾನು ನೀರಿನೊಳಗೆ ಮುಳುಗುತ್ತಿದ್ದೇನೆ ಎಂಬ ಭಾಸವಾಗುತ್ತಿತ್ತು. ನಂತರ ಆತ ನನ್ನ ಆತ್ಯಾಚಾರ ಮಾಡಿ ನನ್ನ ತೊಡಗೆ ಚಾಕುವಿನಿಂದ ಚುಚ್ಚಿದ. ನಂತರ ಇನ್ನೊಂದು ಬಾರಿ ಚಾಕುವನ್ನು ಹಿಡಿದು ನನ್ನ ಮೇಲೆ ಆತ್ಯಾಚಾರ ಮಾಡಿದ ಎಂದು ಹೇಳಿಕೆ ನೀಡಿದ್ದಾರೆ.
ಕೋರ್ಟಿನಲ್ಲಿ ವಿಚಾರಣೆ ವೇಳೆ ಮಾತನಾಡಿರುವ ಆಂಡಿ ಅನೋಕ್ಯೆ ನಾನು ಇದನ್ನು ಬೇಕು ಎಂದು ಮಾಡಿಲ್ಲ. ಇದು ‘ಕ್ಯಾಚ್ ಮಿ ಆ?ಯಂಡ್ ರೇಪ್ ಮಿ’ ಎಂಬ ಆಟದ ಒಂದು ಭಾಗ. ಅದು ಆ ಮಹಿಳೆಯರಿಗೂ ಗೊತ್ತು ಎಂದಿದ್ದಾನೆ. ಅನೋಕ್ಯೆ ಈ ಎಲ್ಲ ಕೃತ್ಯಗಳನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಕೆಲ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.