– ರೋಹಿತ್, ರಹಾನೆ, ದವನ್ ಸೇರಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್
ದುಬೈ: ಇಂದು ನಡೆದ ಕ್ವಾಲಿಫಯರ್-1 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ತಂಡ 57 ರನ್ಗಳ ಅಂತರದಿಂದ ಗೆದ್ದು ಫೈನಲ್ ತಲುಪಿದೆ.
ಇಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಬೇಗನೇ ಔಟ್ ಆದರು ಕೂಡ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಆಟದಿಂದ ನಿಗದಿತ 20 ಓವರಿನಲ್ಲಿ 200 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 143 ರನ್ಗಳಿಸಿ ಸೋತಿತು.
Advertisement
An all-round performance by #MumbaiIndians as they beat #DelhiCapitals by 57 runs and march into the #Dream11IPL final ????????????#MIvDC pic.twitter.com/el0nvnT58A
— IndianPremierLeague (@IPL) November 5, 2020
Advertisement
ಬುಮ್ರಾ ಬೌಲಿಂಗ್ ಅಬ್ಬರ
ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅಬ್ಬರದ ಬ್ಯಾಟಿಂಗ್ ಮಾಡಿದರು. ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 14 ರನ್ ನೀಡಿ ಬರೋಬ್ಬರಿ ನಾಲ್ಕು ವಿಕೆಟ್ ಪಡೆದರು. ಜೊತೆಗೆ ಒಂದು ಮೇಡನ್ ಓವರ್ ಕೂಡ ಮಾಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಟ್ರೆಂಟ್ ಬೌಲ್ಟ್ ಎರಡು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಒಂದು ಮೇಡನ್ ಸಮೇತ 9 ರನ್ ನೀಡಿದರು.
Advertisement
Advertisement
ಶೂನ್ಯ ಸುತ್ತಿದ 6 ಜನ ಆಟಗಾರರು
ಇಂದು ನಡೆದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್ ಆಗಿದ್ದಾರೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕ ರೋಹಿತ್ ಶರ್ಮಾ ಮತ್ತು ಇನ್ ಫಾರ್ಮ್ ಆಟಗಾರ ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತ ಬೆನ್ನಟ್ಟಲು ಬಂದ ಡೆಲ್ಲಿ ತಂಡದ ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ ಮತ್ತು ಡೇನಿಯಲ್ ಸ್ಯಾಮ್ಸ್ ಶೂನ್ಯಕ್ಕೆ ಔಟ್ ಆಗಿದ್ದಾರೆ.
Bowled!
Bumrah cleans up Marcus Stoinis in his 2nd spell ????????
Stoinis' fighting knock of 65 comes to an end.
Live: https://t.co/vh5U9Z4xyY #MIvDC #Dream11IPL pic.twitter.com/1FxjrV3Zmp
— IndianPremierLeague (@IPL) November 5, 2020
ಮುಂಬೈ ಇಂಡಿಯನ್ಸ್ ನೀಡದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಬಂದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಅವರು ಡಬಲ್ ಶಾಕ್ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಇನ್ನಿಂಗ್ಸ್ ನ ಎರಡನೇ ಬಾಲಿನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ಔಟ್ ಆದರು. ನಂತರ ಬಂದ ಅಜಿಂಕ್ಯ ರಹಾನೆ ಅವರು ಕೂಡ ಮೊದಲನೇ ಓವರ್ ಐದನೇ ಬಾಲಿನಲ್ಲಿ ಶೂನ್ಯ ಸುತ್ತಿ ಟ್ರೆಂಟ್ ಬೌಲ್ಟ್ ಗೆ ಔಟ್ ಆಗಿ ಪೆವಿಲಿಯನ್ ಸೇರಿದರು.
FIFTY!
Marcus Stoinis fighting hard at the moment as he brings up his half-century off 36 balls!#DelhiCapitals are 75/5 after 12 overs. #MIvDC #Dream11IPL pic.twitter.com/dwFkHk76j2
— IndianPremierLeague (@IPL) November 5, 2020
ಎರಡನೇ ಓವರ್ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ತಮ್ಮ ಸ್ಪೀಡ್ ಯಾರ್ಕರ್ ಮೂಲಕ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ ಮೂರನೇ ಓವರ್ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ರಿಷಭ್ ಪಂತ್ ಮತ್ತು ಮಾರ್ಕಸ್ ಸ್ಟೊಯಿನಿಸ್ ರನ್ ಕಲೆ ಹಾಕಿದರು. ಆದರೆ 7ನೇ ಓವರ್ 5ನೇ ಬಾಲಿನಲ್ಲಿ 3 ರನ್ಗಳಿಸಿ ರಿಷಭ್ ಪಂತ್ ಔಟ್ ಆದರು.
ಒಂದು ಕಡೆ ವಿಕೆಟ್ ಕಳೆದುಕೊಂಡರು ಉತ್ತಮವಾಗಿ ಆಡಿದ ಮಾರ್ಕಸ್ ಸ್ಟೊಯಿನಿಸ್ ಅವರು 36 ಬಾಲಿಗೆ ಅರ್ಧಶತಕ ಸಿಡಿಸಿದರು. ಆದರೆ 15ನೇ ಓವರಿನಲ್ಲಿ 46 ಬಾಲಿಗೆ 65 ರನ್ ಸಿಡಿಸಿ ಆಡುತ್ತಿದ್ದ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಜಸ್ಪ್ರೀತ್ ಬುಮ್ರಾ ಅವರು ಔಟ್ ಮಾಡಿದರು. ನಂತರ ಬಂದ ಡೇನಿಯಲ್ ಸ್ಯಾಮ್ಸ್ ಅವರು ಕೂಡ ಶೂನ್ಯ ಸುತ್ತಿ ಔಟ್ ಆಗಿ ಹೊರನಡೆದರು. ನಂತರ 42ರನ್ ಗಳಿಸಿ ಆಕ್ಸರ್ ಪಟೇಲ್ ಔಟ್ ಆದರು.