ಡೆಹ್ರಾಡೂನ್: 2018ರಲ್ಲಿ ಮೇದೋಜೀರಕ ಗ್ರಂಥಿ, (ಪ್ಯಾಂಕ್ರಿಯಾಸ್) ಮತ್ತು ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ಉತ್ತರಾಖಂಡದ ಮಹಿಳೆಯೊಬ್ಬರು (Uttarakhand woman) ಇತ್ತೀಚೆಗಷ್ಟೆ ಚಂಡೀಗಢದ (Chandigarh) ಪಿಜಿಐಎಂಇಆರ್ (PGIMER) ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
2018 ರವರೆಗೆ 23 ವರ್ಷದ ಸರೋಜ್ ಶರ್ಮಾ ಅವರು ಅನಾರೋಗ್ಯದಿಂದ ಸಂಕಷ್ಟದ ಬದುಕು ನಡೆಸುತ್ತಿದ್ದರು. ಹಲವಾರು ವರ್ಷಗಳ ಕಾಲ ಟೈಪ್ -1 ಮಧುಮೇಹ (Type-1 diabetes) ರೋಗಿಯಾಗಿದ್ದರು. ನಂತರ 2016 ರಲ್ಲಿ ಮೂತ್ರಪಿಂಡ (Kidney) ಮತ್ತು ಮೇದೋಜೀರಕ ಗ್ರಂಥಿ ಫೇಲ್ಯೂರ್ ಆಗಿತ್ತು. ಇದಕ್ಕೆ ಡಯಾಲಿಸಿಸ್ ಮಾಡಿಸಿಕೊಂಡು ಬದುಕುಳಿದಿದ್ದರು. 2018ರಲ್ಲಿ ವೈದ್ಯರು ದಾನ ಮಾಡಿದ ಮೂತ್ರಪಿಂಡಗಳು ಮತ್ತು ಮೇದೋಜೀರಕ ಗ್ರಂಥಿ ಆಪರೇಷನ್ ಮಾಡಿದ ನಂತರ ಅವರ ಜೀವನ ಸಾಧಾರಣ ಸ್ಥಿತಿಗೆ ಬಂತು.
Advertisement
Advertisement
ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್‍ನ ವೈದ್ಯರು ಸರೋಜ್ ಶರ್ಮಾ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಖರ್ಗೆ – ಕಡೆಯ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆ
Advertisement
ತಮ್ಮ ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಪಿಜಿಐಎಂಇಆರ್‍ಯ ಡಾ. ಆಶಿಶ್ ಶರ್ಮಾ ಅವರನ್ನು 2020ರಲ್ಲಿ ಸರೋಜ್ ಅವರು ಸಂಪರ್ಕಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ನನ್ನ ಜೀವನ ಸುಲಭವಾಗಿದೆ. ಋತುಚಕ್ರ ಕೂಡ ನಿಯಂತ್ರಣದಲ್ಲಿದೆ. ಇದನ್ನೂ ಓದಿ: 6 ತಿಂಗಳಿಂದ ಕಚೇರಿಗೆ ಬರದೇ ಸಂಬಳ ಪಡೀತಿದ್ದ ಮಹಿಳಾ ಅಧಿಕಾರಿ ವಜಾಗೊಳಿಸಿದ ಬ್ರಿಜೇಶ್ ಪತಕ್
Advertisement
ಬಳಿಕ 2020ರಲ್ಲಿ ವಿಕಾಸ್ ಶರ್ಮಾ ಅವರನ್ನು ಸರೋಜ್ ಶರ್ಮಾ ವಿವಾಹವಾದರು. ಮದುವೆ ನಂತರ ಸರೋಜ್ ಗರ್ಭಧಾರಣೆ ಬಗ್ಗೆ ಅನುಮಾನ ಹೊಂದಿದ್ದರಿಂದ ಮತ್ತೆ ಅವರು ಡಾ. ಆಶಿಶ್ ಶರ್ಮಾ ಅವರನ್ನು ಸಂಪರ್ಕಿಸಿದ್ದರು. ಇದೀಗ ಮದುವೆಯಾದ ಎರಡು ವರ್ಷಗಳ ನಂತರ ಸರೋಜ್, ಸೆಪ್ಟೆಂಬರ್ 28 ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಸ್ತ್ರೀರೋಗತಜ್ಞರಾದ ಡಾ.ಸೀಮಾ ಚೋಪ್ರಾ ಅವರು, ಕಿಡ್ನಿ ಕಸಿ ಮಾಡಿದ ಕಾರಣ ಗರ್ಭಧಾರಣೆ ಬಹಳ ಅಪಾಯವಾಗಿತ್ತು. ಆದರೆ ಸುರಕ್ಷಿತವಾದ ಹೆರಿಗೆಗಾಗಿ ನಾವು ಸಿಸೇರಿಯನ್ ಮಾಡಿದ್ದೇವೆ. ಮಗು 2.5 ಕೆಜಿ ತೂಕ ಇದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.