ಕಲ್ಯಾಣಮಂಟಪದ ಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ – 4 ವರ್ಷದ ಮಗು ದುರ್ಮರಣ

Public TV
1 Min Read
Shivam Death ElectricShock

ಬೆಂಗಳೂರು: ಏರ್ ಕೂಲರ್‌ನಿಂದ (Air Cooler) ಎಲೆಕ್ಟ್ರಿಕ್ ಶಾಕ್ (Electric Shock) ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟ ಘಟನೆ ಬಸವೇಶ್ವರ ನಗರದ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ.

ಮೃತ ಮಗುವನ್ನು ಎಂ.ಶಿವಂ (4) ಎಂದು ಗುರುತಿಸಲಾಗಿದೆ. ವೆಸ್ಟ್ ಆಫ್ ಕಾರ್ಡ್ ರೋಡ್‍ನ ಅಭಿಮಾನಿ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ ರಿಸೆಪ್ಷನ್ ವೇಳೆ ಈ ಘಟನೆ ನಡೆದಿದೆ. ಬುಧವಾರ ಈ ಅವಘಡ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರಿಗೆ ಮತ್ತೆ ಬಂದೋಬಸ್ತ್‌ ನೀಡಲು ಆಗ್ತಿತ್ತಾ? – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಶಿವಂ, ಕೆಂಪೆಗೌಡ ನಗರ ನಿವಾಸಿಯಾದ ಪ್ರದೀಪ್ ಮತ್ತು ದೀಪಾ ದಂಪತಿ ಪುತ್ರ ಎಂದು ತಿಳಿದುಬಂದಿದೆ. ಸಂಬಂಧಿಕರ ಮದುವೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಗು ಏರ್ ಕೂಲರ್ ಬಳಿ ಬಿದ್ದಿರೋದನ್ನು ನೋಡಿ ತಾಯಿ ಹತ್ತಿರ ಹೋದಾಗ ತಾಯಿಗೂ ಕರೆಂಟ್ ಶಾಕ್ ಹೊಡೆದಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕಲ್ಯಾಣ ಮಂಟಪದ ಮಾಲೀಕ ದಿವಾಕರ್, ಮ್ಯಾನೇಜರ್ ಸಂತೋಷ್, ಎಲೆಕ್ಟ್ರಿಷಿಯನ್ ಸತೀಶ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಮಂಡ್ಯ | ಮದ್ವೆಗೆ ಹುಡುಗಿ ನೋಡಿಕೊಂಡು ಬೆಂಗಳೂರಿಗೆ ಹೋದವನು ಮನೆಗೆ ಹಿಂತಿರುಗಿದ್ದು ಶವವಾಗಿ…

Share This Article