ಹೈದರಾಬಾದ್: ಇತ್ತೀಚೆಗೆ ಬೀದಿ ನಾಯಿಗಳ (Stray Dog) ಉಪಟಳ ಹೆಚ್ಚಾಗುತ್ತಿದ್ದು, ಜನರ ಮೇಲೆ ದಾಳಿ ಮಾಡುವಂತಹ ಘಟನೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇದೀಗ 4ರ ಪುಟ್ಟ ಬಾಲಕನೊಬ್ಬ (Boy) ಬೀದಿ ನಾಯಿಗಳ ಅಟ್ಟಹಾಸಕ್ಕೆ ಬಲಿಯಾಗಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ (Telangana) ವರದಿಯಾಗಿದೆ.
ವರದಿಗಳ ಪ್ರಕಾರ ಮೃತ ಬಾಲಕನ ತಂದೆ ಗಂಗಾಧರ್ ಘಟನೆ ನಡೆದ ವಸತಿ ಪ್ರದೇಶದ ಆವರಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಾಲಕ ಅದೇ ವಸತಿ ಪ್ರದೇಶದಲ್ಲಿ ಆಟವಾಡುತ್ತಾ ಸಾಗುತ್ತಿದ್ದಾಗ ಏಕಾಏಕಿ ಕೆಲ ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ಹಳೆಯ ಪೀಠೋಪಕರಣ ನೀಡಿದ್ದಕ್ಕೆ ಮದುವೆಯನ್ನು ರದ್ದುಪಡಿಸಿದ ವರ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕ ನಡೆದುಕೊಂಡು ಹೋಗುತ್ತಿದ್ದಾಗ 3 ನಾಯಿಗಳು ಆತನನ್ನು ಸುತ್ತುವರಿದಿವೆ. ಬಾಲಕ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಆತನನ್ನು ನಾಯಿಗಳು ಬೀಳಿಸಿ, ಬಟ್ಟೆಯನ್ನು ಎಳೆದಾಡಿವೆ. ಬಾಲಕ ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿಂದ ಏಳಲು ಸಾಧ್ಯವಾಗದೇ ಹೋಗುತ್ತಾನೆ. ಬಳಿಕ ನಾಯಿಗಳು ಬಾಲಕನ ಇಡೀ ದೇಹಕ್ಕೆ ಕಚ್ಚಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಕಡಬದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭ
ಬಳಿಕ ಬಾಲಕನ ಚೀರಾಟ ಕೇಳಿದ ಗಂಗಾಧರ್ ಸ್ಥಳಕ್ಕೆ ದಾವಿಸಿದ್ದಾರೆ. ತಕ್ಷಣವೇ ಅವರು ಮಗನನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k