ಲಂಡನ್: ಆಸ್ಟ್ರೇಲಿಯಾದ 4 ವರ್ಷದ ಪೋರನೊಬ್ಬ ತಾನು ಬ್ರಿಟನ್ ರಾಣಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಂಡಿದ್ದಾನೆ.
ಹುಡುಗನ ತಂದೆ ಆಸ್ಟ್ರೇಲಿಯಾದ ಟಿವಿ ವಾಹಿನಿಯೊಂದರಲ್ಲಿ ನಿರೂಪಕರಾಗಿದ್ದು, ತನ್ನ ಮಗ ಹೇಳುವಂತೆ ಡಯಾನಾಳ ಪುನರ್ಜನ್ಮವೆಂದು ನಂಬಿದ್ದಾನೆ ಎಂದು ಯುಕೆ ಮಾಧ್ಯಮವೊಂದು ವರದಿ ಮಾಡಿದೆ.
https://www.instagram.com/p/ByuhpsiAziw/?
ಆಸ್ಟ್ರೇಲಿಯಾದ ಟಿವಿ ವಾಹಿನಿ ನಿರೂಪಕ ಡೇವಿಡ್ ಕ್ಯಾಂಪ್‍ಬೆಲ್ ಪುತ್ರ ಬಿಲ್ಲಿ ಕ್ಯಾಂಪ್‍ಬೆಲ್. ರಾಣಿ ಡಯಾನಾ 1997ರಲ್ಲಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ. ರಾಣಿಯ ಸಾವಿನ 18 ವರ್ಷಗಳ ನಂತರ ಈ ಪೋರ ಜನಿಸಿದ್ದು, ಇದೀಗ ರಾಣಿಯ ಪುನರ್ಜನ್ಮ ನಾನೇ ಎಂದು ಹೇಳುತ್ತಿದ್ದಾನೆ.
https://www.instagram.com/p/BuP9FXxgoUO/?
ಮಗನ ಮಾತು ಕೇಳಿ ದಿಗ್ಬ್ರಮೆಗೊಂಡ ಅವನ ತಂದೆ, ಬಿಲ್ಲಿ(ಈಗ ಎರಡು ವರ್ಷ) ರಾಣಿ ಡಯಾನಾ ಅವರ ಫೋಟೊ ತೋರಿಸಿ ನೋಡಿ ಇದು ನಾನು ರಾಣಿಯಾಗಿದ್ದಾಗಿನ ಫೋಟೊ ಎಂದು ಹೇಳುತ್ತಾರೆ. ಈ ವರೆಗೂ ಡಯಾನಾಳೊಂದಿಗಿನ ನನ್ನ ಮಗನ ಗೀಳು ಇನ್ನೂ ನಿಂತಿಲ್ಲ ಎಂದು ಡೆವಿಡ್ ವಿವರಿಸಿದ್ದಾರೆ.
ವಿಚಿತ್ರವೆಂದರೆ, ಬಿಲ್ಲಿ ಎಂಬ ಬಾಲಕ ಡಯಾನಾಳ ಜೀವನದ ಯಾವುದೇ ಘಟನೆಯನ್ನು ವಿವರಿಸ ಬಲ್ಲನು. ಅಲ್ಲದೆ, ರಾಜಕುಮಾರಿ ಡಯಾನಳ ಮಕ್ಕಳಾದ ರಾಜಕುಮಾರ ವಿಲಿಯಂ ಮತ್ತು ಹ್ಯಾರಿ ನನ್ನ ಮಕ್ಕಳು ಎಂದು ಹೇಳುತ್ತಾನೆ. ಅಲ್ಲದೆ, ಬಾಲಕ ಪರಿಚಿತರಲ್ಲದ ಕುಡುಂಬ ಸದಸ್ಯರೊಂದಿಗೆ ಆತ್ಮೀರಂತೆ ಮಾತನಾಡುತ್ತಾನೆ. ಅದರಲ್ಲಿ ಕೆಲವು ಹುಡುಗರ ಹೆಸರನ್ನೂ ಹೇಳುತ್ತಾನೆ ಎಂದು ಹುಡುಗನ ತಂದೆ ವಿವರಿಸಿದ್ದಾರೆ.
ಹುಟ್ಟಿ ಕೆಲವೇ ಗಂಟೆಗಳಲ್ಲಿ ಮರಣ ಹೊಂದಿದ ರಾಣಿ ಡಯಾನಾಳ ಸಹೋದರ ಜಾನ್ ಬಗ್ಗೆಯೂ ಸಹ ಬಿಲ್ಲಿ ಮಾತನಾಡುತ್ತಾನೆ ಎಂದು ಹುಡುಗನ ತಂದೆ ಡೆವಿಡ್ ತಿಳಿಸಿದ್ದಾರೆ.