ಬಳ್ಳಾರಿ: ಮನೆ ಹತ್ತಿರ ನಿಂತಿದ್ದ ಚರಂಡಿ ನೀರಿಗೆ (Sewage Water) ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹೊಸಪೇಟೆ (Hospet) ನಗರದ ಅನಂತಶಯನ ಗುಡಿ ಬಡಾವಣೆಯಲ್ಲಿ ನಡೆದಿದೆ.
ವಿರಾಟ್.ಜೆ (4) ಮೃತ ಬಾಲಕ. ಬಾಲಕನ ಮನೆ ಹತ್ತಿರದ ಖಾಲಿ ಜಾಗದಲ್ಲಿ ಚರಂಡಿ ನೀರು ನಿಂತಿತ್ತು. ಆಟವಾಡಲು ಹೋದ ಸಂದರ್ಭ ನೀರು ನಿಂತಿರುವುದನ್ನು ಗಮನಿಸದೇ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿ: ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿ ಉಡಾವಣೆ
ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸುದ್ದಿ ತಿಳಿದು ಹೊಸಪೇಟೆ ಶಾಸಕ ಹೆಚ್‌ಆರ್ ಗವಿಯಪ್ಪ ಆಸ್ಪತ್ರೆಗೆ ದೌಡಾಯಿಸಿ ಮೃತ ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪಟ್ಟಣದಲ್ಲಿ ಚರಂಡಿ ನೀರು ನಿಂತಿರೋ ಪ್ರದೇಶಗಳನ್ನು ಕೂಡಲೇ ಸ್ವಚ್ಛಗೊಳಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ಥಳ ಮಹಜರು ವೇಳೆ ಪರಾರಿಗೆ ಯತ್ನ – ಅಸ್ಸಾಂ ಹತ್ಯಾಚಾರ ಆರೋಪಿ ಕೊಳಕ್ಕೆ ಬಿದ್ದು ಸಾವು