ಚೆನ್ನೈ: ಉಚಿತ ಸೀರೆಯನ್ನು (Saree) ಪಡೆಯಲು ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತದಿಂದ ನಾಲ್ವರು ವೃದ್ಧ ಮಹಿಳೆಯರು (Women) ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ (Tamil Nadu) ತಿರುಪತ್ತೂರು ಜಿಲ್ಲೆಯ ವನ್ನಿಯಂಬಾಡಿ ಬಳಿ ನಡೆದಿದೆ.
ಸೀರೆ ವಿತರಣಾ ಕಾರ್ಯಕ್ರಮದ ವೇಳೆ ಈ ಘಟನೆ ಸಂಭವಿಸಿದೆ. ತೈಪೂಸಂ ಹಬ್ಬದ ಮುನ್ನ ಅಯ್ಯಪ್ಪನ್ ಎಂಬಾತ ಉಚಿತ ಸೀರೆ ವಿತರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಟೋಕನ್‍ಗಳನ್ನು ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು.
Advertisement
Advertisement
ಉಚಿತ ಸೀರೆ ಪಡೆಯಲು ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತಕ್ಕೆ ನಾಲ್ವರು ವೃದ್ಧ ಮಹಿಳೆಯರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರು ಗಾಯಗೊಂಡಿದ್ದಾರೆ. ಜೊತೆಗೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ
Advertisement
Advertisement
ತೈಪೂಸಂ ಎಂಬುದು ತಮಿಳು ತಿಂಗಳ ಥಾಯ್‍ನಲ್ಲಿ ಹುಣ್ಣಿಮೆಯಂದು ಹಿಂದೂ ತಮಿಳು ಸಮುದಾಯದಿಂದ ಆಚರಿಸಲಾಗುವ ಹಬ್ಬವಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಹಿಟ್ & ರನ್ ಕೇಸ್ – ಕಾರು ಡಿಕ್ಕಿ, ಮೇಲಿಂದ ಹಾರಿದ ಯುವತಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k