ನಾಲ್ವರು ಮಹಿಳಾ ಹೋರಾಟಗಾರ್ತಿಯರ ಹತ್ಯೆಯಾಗಿದೆ ಎಂದ ತಾಲಿಬಾನ್

Public TV
2 Min Read
TALIBAN WOMEN

ಕಾಬೂಲ್: ಉತ್ತರ ನಗರವಾದ ಮಜಾರ್-ಇ-ಷರೀಫ್‍ನಲ್ಲಿ ನಾಲ್ವರು ಮಹಿಳೆಯರ ಹತ್ಯೆಯಾಗಿದ್ದು, ಅದರಲ್ಲಿ ಮಹಿಳಾ ಹೋರಾಟಗಾರ್ತಿಯರು ಇದ್ದರು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತಿಳಿಸಿದೆ.

ನಾಲ್ಕು ಮಹಿಳೆಯರನ್ನು ಹತ್ಯೆ ಮಾಡಲಾಗಿದ್ದು, ಅವರ ಶವವು ನಗರದ ಮನೆಯೊಂದರಲ್ಲಿ ಪತ್ತೆಯಾಗಿದೆ. ಈಗಾಗಲೇ ಮಹಿಳೆಯರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸೈಯದ್ ಖೋಸ್ತಿ ತಿಳಿಸಿದರು.

Taliban 1

ಬಂಧಿತ ಆರೋಪಿಗಳು ಪೊಲೀಸರು ಪ್ರಾಥಮಿಕ ವಿಚಾರಣೆ ಮಾಡಿದಾಗ ಮಹಿಳೆಯರನ್ನು ಮನೆಗೆ ಕರೆಸಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಪ್ರಕರಣವನ್ನು ನ್ಯಾಯಾಲಯದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಮಜಾರ್-ಇ-ಶರೀಫ್‍ನ ಮೂಲಗಳ ಪ್ರಕಾರ, ಸತ್ತವರಲ್ಲಿ ಒಬ್ಬರು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ವಿಶ್ವವಿದ್ಯಾನಿಲಯದ ಉಪನ್ಯಾಸಕ ಫ್ರೋಜನ್ ಸಫಿ ಎಂದು ಹೇಳಲಾಗುತ್ತಿದೆ. ಇವರು ನಗರದಲ್ಲಿ ಹೆಸರುವಾಸಿಯಾಗಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ: ಸುಧಾಕರ್ ಪ್ರಶ್ನೆ

ಅಂತರರಾಷ್ಟ್ರೀಯ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಈ ಕುರಿತು ಮಾತನಾಡಿದ್ದು, ನನಗೆ ಮೂರು ವಾರಗಳ ಹಿಂದೆ ವಿದೇಶದಲ್ಲಿ ಸುರಕ್ಷಿತವಾಗಿರಲು ನನ್ನ ಪ್ರಯತ್ನಗಳಲ್ಲಿ ನೆರವು ನೀಡುವಂತೆ ಯಾರೋ ಒಬ್ಬರಿಂದ ಕರೆ ಬಂದಿತ್ತು. ನನ್ನ ಬಗ್ಗೆ ಅವರು ಎಲ್ಲ ಮಾಹಿತಿಯನ್ನು ತಿಳಿದುಕೊಂಡಿದ್ದರು. ನನ್ನ ದಾಖಲೆಗಳನ್ನು ಕಳುಹಿಸಲು ಕೇಳಿದರು. ಆದರೆ ನಾನು ಅವರನ್ನು ಪ್ರಶ್ನಿಸಿದೆ, ಅದಕ್ಕೆ ಅವರು, ನನಗೆ ಯುಎಸ್ ಗೆ ಮಾಹಿತಿಯನ್ನು ನೀಡುವ ಉಸ್ತುವಾರಿ ವಹಿಸಿರುವ ರೀತಿ ನಮ್ಮ ಕಚೇರಿಯ ಅಧಿಕಾರಿಯಂತೆ ನಟಿಸಿದರು ಎಂದು ಹೇಳಿದರು.

TALIBAN PROTEST

ಅನುಮಾನ ಬಂದ ನಂತರ ನಾನು ಆ ಕರೆಯನ್ನು ಬ್ಲಾಕ್ ಮಾಡಿದ್ದು, ಈಗ ಭಯದಲ್ಲಿ ಬದುಕುತ್ತಿದ್ದೇನೆ. ಈ ಹತ್ಯೆಯ ಬಗ್ಗೆ ಕೇಳಿದಾಗ ನನಗೆ ಇನ್ನೂ ಆಘಾತಕ್ಕೆ ಬಳಗಾಗಿದ್ದೇನೆ. ನಾನು ಈಗಾಗಲೇ ಹೆದರುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ಸರಿಯಿಲ್ಲ. ಯಾರಾದರೂ ನನ್ನ ಮನೆ ಬಾಗಿಲಿಗೆ ಬಂದು ನನ್ನನ್ನು ಎಲ್ಲೋ ಕರೆದೊಯ್ದು ಗುಂಡು ಹಾರಿಸಬಹುದು ಎಂದು ನಾನು ಯಾವಾಗಲೂ ಹೆದರುತ್ತೇನೆ ಎಂದು ಹೇಳಿದರು.

ಹಿಂದಿನ ಯುಎಸ್ ಬೆಂಬಲಿತ ಸರ್ಕಾರದ ವಿರುದ್ಧ 20 ವರ್ಷಗಳ ಯುದ್ಧದ ನಂತರ ಆಗಸ್ಟ್‍ನಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಆಳವಾದ ಸಂಪ್ರದಾಯವಾದಿ ಇಸ್ಲಾಮಿಸ್ಟ್ ಚಳುವಳಿಯಾಗಿದೆ. ಅವರ ಕಳೆದ ಆಳ್ವಿಕೆಯ ಅವಧಿಯಲ್ಲಿ, ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ನಿಷೇಧಿಸಲಾಗಿತು. ಮತ್ತೆ ಸರ್ಕಾರಕ್ಕೆ ಮರಳಿದ ನಂತರ ಅನೇಕ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಇದನ್ನೂ ಓದಿ: ಸೂಟ್ಕೇಸ್ ತೆಗೆದು ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ!

taliban women

ಉಳಿದಿರುವ ಕೆಲವು ಮಹಿಳೆಯರು ಕಾಬೂಲ್‍ನಲ್ಲಿ ತಮ್ಮ ಹಕ್ಕುಗಳನ್ನು ಗೌರವಿಸಬೇಕು. ಹುಡುಗಿಯರು ಸಾರ್ವಜನಿಕ ಪ್ರೌಢಶಾಲೆಗಳಿಗೆ ಹೋಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ಇದನ್ನು ತಾಲಿಬಾನ್‍ಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದು ಅಲ್ಲದೇ ಈ ಕುರಿತು ಮಾಧ್ಯಮಗಳು ವರದಿ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬಂಧಿಸುವುದಾಗಿ ಬೆದರಿಕೆ ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *