ತುಮಕೂರು: ಜಿಲ್ಲೆಯ ಕುಣಿಗಲ್‍ನ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದೇ ಕಾಲೇಜಿನಲ್ಲಿ ನಾಲ್ಕು ಅವಳಿ ಜೋಡಿ ಓದುತ್ತಿದ್ದು, ಕಾಲೇಜಿನ ವಿಶೇಷ ಆಕರ್ಷಣೆ ಆಗಿದ್ದಾರೆ.
ಈ ಅವಳಿ-ಜವಳಿ ಜೋಡಿಗಳನ್ನು ನೋಡಿದರೆ ಹುಬ್ಬೇರದವರೇ ಇಲ್ಲ. ಏಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ವರು ಅವಳಿ ಜವಳಿ ಚಹರೆ ಒಂದೇ ರೀತಿ ಇದೆ. ಅರುಣ್-ವರುಣ್, ಕಾವ್ಯ-ಕವನ, ಸಾನಿಯಾ-ಸಾಧಿಕಾ, ಕವಿತಾ-ಲಾವಣ್ಯ ಜೋಡಿ ನೋಡಿ ಎಲ್ಲರಿಗೂ ಕನ್‍ಫ್ಯೂಶನ್.
Advertisement
ಈ ನಾಲ್ಕು ಅವಳಿ ಜೋಡಿಗಳ ಕಲರವ ಉಪನ್ಯಾಸಕರು ಹಾಗೂ ಸಹಪಾರಿಗಳಿಗೆ ಅವಳ್ಯಾರು ಇವನ್ಯಾರು ಎಂದು ತಕ್ಷಣಕ್ಕೆ ಗುರುತು ಹಚ್ಚಲು ಆಗದೇ ಪರದಾಡಬೇಕಾಗಿದೆ. ಎಷ್ಟೋ ನಾನು ಅವನಲ್ಲ, ನಾನು ಅವಳಲ್ಲ ಎಂದು ಅವರೇ ಹೇಳಿದ ಬಳಿಕ ಗೊತ್ತಾಗಿರುವ ಪ್ರಸಂಗಗಳು ನಡೆದಿವೆ.
Advertisement
Advertisement
ಈ ಅವಳಿ ಜೋಡಿಗಳ ಇನ್ನೊಂದು ವಿಶೇಷ ಅಂದರೆ ಒಂದೇ ರೀತಿಯ ಯೂನಿಫಾರ್ಮ್, ಒಂದೇ ರೀತಿ ಹೇರ್ ಸ್ಟೈಲ್, ಒಂದೇ ರೀತಿಯ ಮಾತುಕತೆ. ಅದು ಅಲ್ಲದೇ ಯಾವಾಗಲೂ ಜೊತೆ ಜೊತೆಯಲ್ಲೇ ಇರುತ್ತಾರೆ. ಪರೀಕ್ಷೆ ವೇಳೆಯಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಿಶೇಷವಾಗಿ ” ಕುಟುಂಬ” ಪಾಠ ಮಾಡಲಾಗತ್ತದೆ.
Advertisement
ಶಿಕ್ಷಕರು, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಗುಣಮಟ್ಟ ಹೆಚ್ಚಿಸಲು ಕಾಳಜಿ ವಹಿಸಿದರೆ, ಇದೇ ಕಾಲೇಜಿನ ನಾಲ್ವರು ಅವಳಿ ಜೋಡಿಗಳು ಆ ಕಾಲೇಜಿನ ವಿಶೇಷ ಆಕರ್ಷಣೆಯಾಗಿದ್ದಾರೆ. ಒಂದೇ ಕಾಲೇಜಿನಲ್ಲಿ ಬರೋಬ್ಬರಿ ನಾಲ್ಕು ಜೋಡಿ ಅವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರೋದ್ರಿಂದ ಕಾಲೇಜಿನ ವಿಶೇಷತೆಯೂ ಹೆಚ್ಚಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv