ಬೆಂಗಳೂರು: ಸಾರಿಗೆ ಇಲಾಖೆಯ (Department of Transport) 4 ನಿಗಮಗಳು ನಷ್ಟದಲ್ಲಿವೆ. ಶಕ್ತಿ ಯೋಜನೆಗೆ (Shakti Scheme) ಸರ್ಕಾರ 2 ಸಾವಿರ ಕೋಟಿ ಹಣ ಬಾಕಿ ನೀಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ಇಲಾಖೆ ನಿಗಮಗಳ ನಷ್ಟದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದರು. ಕಳೆದ 5 ವರ್ಷಗಳಿಂದಲೂ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ. 2019-20ರಿಂದ 2023-24ವರೆಗೆ ಕೆಎಸ್‌ಆರ್‌ಟಿಸಿ- 1500.34 ಕೋಟಿ ನಷ್ಟ. ಬಿಎಂಟಿಸಿ- 1544.62 ಕೋಟಿ. ಕಲ್ಯಾಣ ಕರ್ನಾಟಕ ಸಾರಿಗೆ- 777.64 ಕೋಟಿ.ವಾಯುವ ವಾಯುವ್ಯ ಕರ್ನಾಟಕ ನಿಗಮ- 1386.58 ಕೋಟಿ ನಷ್ಟದಲ್ಲಿವೆ ಎಂದು ಸಚಿವರು ಅಂಕಿಅಂಶಗಳನ್ನ ಕೊಟ್ಟರು. ಇದನ್ನೂ ಓದಿ: ಕೇದಾರನಾಥ್ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?
ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸರ್ಕಾರ ಸಹಕಾರ ಕೊಡದೇ ಹೋದರೆ ಸಾರಿಗೆ ನಿಗಮಗಳಿಗೆ ಕಷ್ಟ ಆಗುತ್ತದೆ. ಇಡೀ ದೇಶದಲ್ಲಿ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಷ್ಟವನ್ನು ತಡೆಯಲು ಬಸ್ ಟಿಕೆಟ್ ದರ ಜಾಸ್ತಿ ಮಾಡಲಾಗಿದೆ. ಸಿಎಂ ಅವರು 2 ಸಾವಿರ ಕೋಟಿ ಲೋನ್ ಕೊಡಿಸಿದ್ದಾರೆ. ಅದನ್ನ ಸರ್ಕಾರ ತೀರಿಸುತ್ತದೆ. ಮೋಟಾರ್ ಟ್ಯಾಕ್ಸ್ ವಿನಾಯ್ತಿ ಸಾರಿಗೆ ಇಲಾಖೆಗೆ ಸರ್ಕಾರ ಕೊಟ್ಟಿದೆ ಎಂದು ತಿಳಿಸಿದರು. 2 ಸಾವಿರ ಕೋಟಿ ಶಕ್ತಿ ಯೋಜನೆ ಹಣವನ್ನ ಸರ್ಕಾರ ಬಾಕಿ ಉಳಿಸಿಕೊಂಡಿದೆ. 9,978 ಕೋಟಿ ಶಕ್ತಿ ಹಣ ಸರ್ಕಾರ ಕೊಡಬೇಕು. ಇದರಲ್ಲಿ 2 ಸಾವಿರ ಕೋಟಿ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ