ಚಿಕ್ಕೋಡಿ: ಸಿನಿಮೀಯ ರೀತಿಯಲ್ಲಿ ಬಂಗಾರದ ವ್ಯಾಪಾರಿಯ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಖದೀಮರನ್ನು ಬಂಧಿಸಿ, ಅವರ ಬಳಿ ಇದ್ದ 75 ಗ್ರಾಂ ಬಂಗಾರ, 2.5 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ (Belgavi) ಜಿಲ್ಲೆಯ ನಿಪ್ಪಾಣಿಯಲ್ಲಿ (Nippani) ನಡೆದಿದೆ.
ಕಳೆದ ಏಪ್ರಿಲ್‍ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಭೀವಶಿ ಗ್ರಾಮದ ಬಳಿ ನಡೆದಿದ್ದ ಘಟನೆಯಲ್ಲಿ ಬಂಗಾರ ವ್ಯಾಪಾರಿಯಾದ ದೋಂಡಿರಾಮ್ ವಿಷ್ಣು ಕಾಂಬಳೆ ಎಂಬವರನ್ನು ಸಿನಿಮಿಯ ರೀತಿಯಲ್ಲಿ ಅಡ್ಡ ಗಟ್ಟಿ ಬೆಳ್ಳಿ ಬಂಗಾರವನ್ನು ಖದೀಮರು ಕದ್ದಿದ್ದರು. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ನಿಪ್ಪಾಣಿ ಗ್ರಾಮೀಣ ಪೊಲೀಸರು ಇದೀಗ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ನಿದ್ದೆಯಿಂದ ಎದ್ದೇಳಿ- ಬೊಮ್ಮಾಯಿಯವರನ್ನು ಕುಂಭಕರ್ಣನಿಗೆ ಹೋಲಿಸಿ, 150ನೇ ದಿನದ ಏಮ್ಸ್ ಹೋರಾಟ
ಸದ್ಯ ಬಂಧಿತರಿಂದ 75 ಗ್ರಾಂ ಬಂಗಾರ, 2.5 ಕೆಜಿ ಬೆಳ್ಳಿ, 4 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಪ್ರದೀಪ್ ಕಾಂಬಳೆ(25), ಅವದೂತ ಕೋಳಿ(25), ಅಕ್ಷಯ್ ಕೊಂಡಗೇರಿ(29), ಪಂಕಜ್ ಕೋಳಿ(23) ಎಂದು ಗುರುತಿಸಲಾಗಿದೆ. ಈ ಸಂಬಂಧ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ಸೇರಿದಂತೆ ಸಿಬ್ಬಂದಿ ಕಾರ್ಯಕ್ಕೆ ಬೆಳಗಾವಿ ಎಸ್.ಪಿ. ಡಾ.ಸಂಜೀವ್ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿರಿಯರಿಗೆ ಸಹಾಯ ಮಾಡೋ ನೆಪದಲ್ಲಿ ಪಿನ್ ನಂಬರ್ ತಿಳಿದುಕೊಂಡು ಹಣ ಲಪಟಾಯಿಸುತ್ತಿದ್ದಾತ ಅಂದರ್