ನವದೆಹಲಿ: ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಸುಬಂಲ್‍ನಲ್ಲಿ ಸಿಆರ್‍ಪಿಎಫ್ ಶಿಬಿರದ ಮೇಲೆ ದಾಳಿ ಮಾಡಲು ಯತ್ನಿಸಿದ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಇಂದು ಮುಂಜಾನೆ 4.10ರ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಸಿಆರ್‍ಪಿಎಫ್ ನ 45ನೇ ಬೆಟಾಲಿಯನ್‍ನ ಶಿಬಿರಕ್ಕೆ ನುಗ್ಗಲು ಯತ್ನಿಸಿದ್ರು. ನಂತರ ಗುಂಡಿನ ದಾಳಿ ಶುರು ಮಾಡಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎಲ್ಲಾ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement
Advertisement
ದಾಳಿ ನಡೆದ ಸ್ಥಳದಿಂದ ನಾಲ್ಕು ಎಕೆ-47 ರೈಫಲ್‍ಗಳು, ಒಂದು ಯುಬಿಜಿಎಲ್(ಅಂಡರ್‍ಬ್ಯಾರೆಲ್ ಗ್ರೆನೇಡ್ ಲಾಂಚರ್) ಹಾಗೂ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.
Advertisement
ಉಗ್ರರು ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿಗೆ ಯತ್ನಿಸಿದ್ದರು. ಆದ್ರೆ ಶಿಬಿರದೊಳಗೆ ಪ್ರವೇಶಿಸುವ ಮುನ್ನವೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
Advertisement
ಚೇತನ್ ಕುಮಾರ್ ಚೀತಾ ಸಿಆರ್‍ಪಿಎಫ್‍ನ ಸುಂಬಲ್ ಶಿಬಿರದ ನೇತೃತ್ವವನ್ನ ವಹಿಸಿದ್ದರು. ಇವರು ಕಳೆದ ವರ್ಷ ಬಂಡಿಪೋರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುವಾಗ 9 ಗುಂಡುಗಳು ತಗುಲಿದ್ರೂ ಬದುಕುಳಿದಿದ್ದರು.
Weapons seized from the Four killed terrorists who were trying to carry out a suicide attack on CRPF camp at Sumbal in Bandipora of J&K pic.twitter.com/Jytj9VqX78
— ANI (@ANI) June 5, 2017
Over a dozen grenades & a huge cache of ammunition recovered from 4 killed terrorists at Sumbal in Jammu and Kashmir's Bandipora. pic.twitter.com/WkCGNtxBX0
— ANI (@ANI) June 5, 2017