ಶ್ರೀನಗರ: ಜಮ್ಮು (Jammu) ಮತ್ತು ಕಾಶ್ಮೀರದ (Kashmir) ಶೋಪಿಯಾನ್‍ನಲ್ಲಿ (Shopian) ನಾಲ್ವರು ಭಯೋತ್ಪಾದಕರನ್ನು ಎನ್‍ಕೌಂಟರ್ ಮಾಡಿ ಭದ್ರತಾ ಪಡೆಗಳು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಾಲ್ವರು ಭಯೋತ್ಪಾದಕರ ಪೈಕಿ ಮೂವರು ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‍ನೊಂದಿಗೆ ಸಂಪರ್ಕ ಹೊಂದಿದ್ದು, ನಾಲ್ಕನೇಯವನು ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನು ಉಲ್ಲೇಖಿಸಿ ಕಾಶ್ಮೀರ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ : ಒಂದೇ ಗ್ರಾಮ, ಒಂದೇ ಗೋತ್ರ ವಿವಾಹ ನಿಷೇಧಕ್ಕೆ ಸರ್ವ ಜಾತಿಯ ಖಾಪ್ ಮಹಾಪಂಚಾಯತ್ ಒತ್ತಾಯ
Advertisement
4 local terrorists killed in two encounters in J-K’s Shopian
Read @ANI Story | https://t.co/DjzL0WJ2ln#JammuAndKashmir #Shopian #Encounter #Securityforces pic.twitter.com/qYZRQojs7g
— ANI Digital (@ani_digital) October 5, 2022
Advertisement
ಶೋಪಿಯಾನ್‍ನ ಡ್ರಾಚ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ಮೂವರು ಜೈಶ್ ಭಯೋತ್ಪಾದಕರ ಪೈಕಿ ಇಬ್ಬರನ್ನು ಹನನ್ ಬಿನ್ ಯಾಕೂಬ್ ಮತ್ತು ಜಮ್ಶೆಡ್ ಎಂದು ಗುರುತಿಸಲಾಗಿದ್ದು, ಅವರಿಬ್ಬರು ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ವಿಶೇಷ ಪೊಲೀಸ್ ಅಧಿಕಾರಿ ಮತ್ತು ಕಾರ್ಮಿಕನ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ – 25 ಮಂದಿ ದುರ್ಮರಣ
Advertisement
Advertisement
ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಶೋಪಿಯಾನ್‍ನ ಡ್ರಾಚ್ ಮತ್ತು ಮೂಲು ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದವು. ಮೂಲುವಿನಲ್ಲಿ ಇನ್ನೂ ಎನ್‍ಕೌಂಟರ್ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.