ಶ್ರೀನಗರ: ರಂಜಾನ್ ಹಬ್ಬರ ಕದನ ವಿರಾಮ ಹಿಂತೆಗೆದುಕೊಂಡ ಬಳಿಕ ನಡೆದ ಭಾರತೀಯ ಸೇನೆಯ ಮೊದಲ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.
ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಭಾರತೀಯ ಸೈನಿಕರು ಹಾಗೂ ಉಗ್ರರ ನಡುವಿನ ಎನ್‍ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
Advertisement
Advertisement
ಕಳೆದ ಜೂನ್ 14 ರಂದು ಬಂಡಿಪೊರಾ ಜಿಲ್ಲೆಯಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 2 ಯೋಧರು ಹುತಾತ್ಮರಾಗಿದ್ದರು. ಇದೇ ವೇಳೆ ಭಾರತ ಸರ್ಕಾರ ರಂಜಾನ್ ಕದನ ವಿರಾಮ ಒಪ್ಪಂದವನ್ನು ಹಿಂಪಡೆಯುತ್ತಿದ್ದಾಗಿ ತಿಳಿಸಿ ಸೈನಿಕರಿಗೆ ಕಾರ್ಯಾರಚಣೆ ನಡೆಸಲು ಸೂಚನೆ ನೀಡಿತ್ತು. ಸದ್ಯ ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರರ ಗುರುತು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಹೆಚ್ಚಿನ ಉಗ್ರರು ಅಡಗಿರುವ ಶಂಕೆ ಮೇಲೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
Advertisement
ಸತತ 1,220 ಗಂಟೆಗಳ ರಂಜಾನ್ ಕದನ ವಿರಾಮದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಶ್ಮೀರಿ ಕಣಿವೆಯಲ್ಲಿ ಶಾಂತಿಯನ್ನು ಕದಡಲು ಯತ್ನಿಸುವವರ ವಿರುದ್ಧ ಹಾಗೂ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೂಚನೆ ನೀಡಿದ್ದಾಗಿ ತಿಳಿಸಿದ್ದರು.
Advertisement
The Security Forces are being directed to take all necessary actions as earlier to prevent terrorists from launching attacks and indulging in violence and killings.
— Rajnath Singh (@rajnathsingh) June 17, 2018