-ಧಾರವಾಡ ಎಸ್‍ಡಿಎಂ ಸ್ಟೂಡೆಂಟ್ಸ್ ಸಾಧನೆ
ಧಾರವಾಡ: ಈ ಚೇರ್ ಲೆಫ್ಟ್ ಅಂದ್ರೆ ಎಡಕ್ಕೆ ಹೋಗುತ್ತೆ. ರೈಟ್ ಅಂದ್ರೆ ಬಲಕ್ಕೆ ಹೋಗುತ್ತೆ. ಹೋಗುವಾಗ್ಲೆ ನಿಲ್ಲು ಅಂದ್ರೆ ನಿಂತೇ ಬಿಡುತ್ತದೆ. ಹೌದು. ಧಾರವಾಡದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೋಗಿಗಳಿಗಾಗಿ ಈ ಹೊಸ ಮೂವಿಂಗ್ ಚೇರನ್ನ ತಯಾರಿಸಿದ್ದಾರೆ.
Advertisement
ಧಾರವಾಡದ ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳು ಈ ಆವಿಷ್ಕಾರವನ್ನ ಮಾಡಿದ್ದಾರೆ. ಇದನ್ನ ವಿಶೇಷವಾಗಿ ವೃದ್ಧ ಹಾಗೂ ಅಂಗವಿಕಲರನ್ನ ಗಮನದಲ್ಲಿಟ್ಟುಕೊಂಡು ಆವಿಷ್ಕರಿಸಲಾಗಿದೆ. ಪುಷ್ಪಾ ಚೌಹಾಣ್, ಕಿರಣ್, ವೈಷ್ಣವಿ ಹಾಗೂ ಕೃತಿಕಾ ಎಂಬ ವಿದ್ಯಾರ್ಥಿನಿಯರ ಒಂದು ವರ್ಷದ ಪರಿಶ್ರಮದಿಂದ ಈ ಚೇರ್ ಅನ್ನು ತಯಾರಿಸಿದ್ದಾರೆ.
Advertisement
ವಿಶೇಷತೆ: 12 ವ್ಯಾಟಿನ ಚಾರ್ಜೇಬಲ್ ಬ್ಯಾಟರಿ ಮೇಲೆ ಓಡಾಡುವ ಈ ವ್ಹೀಲ್‍ಚೇರ್, ಒಟ್ಟು 7 ಆಯಾಮಗಳ ಕಡೆ ಚಲಿಸುತ್ತದೆ. ಈ ಕುರ್ಚಿ ಮೆಮೊರಿಯಲ್ಲಿ ಒಟ್ಟು 80 ಜನರ ಧ್ವನಿಯನ್ನ ಮುದ್ರಿಸಿ ಇಡಬಹುದು. ವಿಶ್ವದ ಯಾವುದೇ ಭಾಷೆಯಲ್ಲಿ ಮೂಮೆಂಟ್ ಆಗಲು ಹೇಳಿದ್ರೂ ಇದು ಚಲಿಸುತ್ತೆ. ಭಾಷೆ ಬದಲಿಸಲು ಕೇವಲ 30 ಸೆಕೆಂಡು ಸಾಕು. 75 ಕೆಜಿ ತೂಕದ ಮನುಷ್ಯ ಇದರ ಮೇಲೆ ಕುಳಿತುಕೊಂಡು ಓಡಾಡಬಹುದು. ಈ ಮೂವಿಂಗ್ ಚೇರ್ ತಯಾರಿಸಲು 48 ಸಾವಿರ ರೂ. ಖರ್ಚಾಗಿದೆ.
Advertisement
Advertisement
ಸತತ ಒಂದು ವರ್ಷಗಳ ಕಾಲ ಪ್ರಯತ್ನ ಪಟ್ಟು ವಿದ್ಯಾರ್ಥಿಗಳು ಮೂವಿಂಗ್ ವ್ಹೀಲ್ ಚೇರ್ ಆವಿಷ್ಕರಿಸಿದ್ದಾರೆ. ವಿದ್ಯಾರ್ಥಿನಿಗಳ ಈ ಆವಿಷ್ಕಾರಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿದ್ರೆ ವಿಶ್ವಖ್ಯಾತಿ ಪಡೆಯಬಹುದು.