– ಎರಡು ದಿನಗಳಲ್ಲಿ 7 ಮಂದಿ ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and kashmir) ಕಥುವಾ ಜಿಲ್ಲೆಯ ದೂರದ ಮಚೇಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಸೈನಿಕರು (Army Personnel) ಹುತಾತ್ಮರಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ಪಟ್ಟಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಲ ಸೇನಾ ವಾಹನಗಳು ಈ ಪ್ರದೇಶದಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು ಎಂದು ಹೇಳಲಾಗಿದೆ. ಇದನ್ನೂ ಓದಿ: ಅಪಘಾತಕ್ಕೂ ಮುನ್ನ 18,730 ರೂ. ಮದ್ಯ ಕುಡಿದಿದ್ದ ಮಿಹಿರ್ ಶಾ – ಮಗ ಮಾಡಿದ ತಪ್ಪಿಗೆ ತಂದೆಗೆ ಜೈಲು!
Advertisement
Advertisement
ಕತುವಾ ಜಿಲ್ಲೆಯ ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಸೋಮವಾರ (ಜು.8) ಮಧ್ಯಾಹ್ನ 3.30ರ ಸುಮಾರಿಗೆ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ನಮ್ಮ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದರು. ಆದ್ರೆ ದುರದೃಷ್ಟವಶಾತ್ ಐವರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯ ಕಾರ್ಪ್ಸ್ ಅಡಿಯಲ್ಲಿ ಈ ಪ್ರದೇಶ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕಳೆದ 2 ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದ 2ನೇ ದಾಳಿಯಾಗಿದೆ. ಜೊತೆಗೆ ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ. ಇತ್ತೀಚೆಗೆ ಇಲ್ಲಿನ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 6 ಭಯೋತ್ಪಾದಕರು ಮೃತಪಟ್ಟಿದ್ದರು. ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ
Advertisement
ಸೇನೆಯ ವಾಹನ ತೆರಳುವ ಕುರಿತು ಮಾಹಿತಿ ಪಡೆದಿದ್ದ ಉಗ್ರರು, ಯೋಜನೆ ರೂಪಿಸಿ, ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸಮೀಪದ ಅರಣ್ಯ ಪ್ರದೇಶದಲ್ಲಿ ಸುಮಾರು ಇಬ್ಬರು-ಮೂವರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಹೆಚ್ಚಿನ ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.