ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬ ನಾಲ್ವರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಓಹಿಯೋದ ಬಟ್ಲರ್ ಟೌನ್‍ಶಿಪ್‍ನಲ್ಲಿ ಗುಂಡೇಟಿಗೆ ನಾಲ್ವರು ಬಲಿಯಾಗಿದ್ದು, ಪೊಲೀಸರು ಈಗ ಆರೋಪಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
The #FBI and Butler Twp Police are searching for Stephen Marlow, a person of interest in multiple shootings today. He was last seen in a white 2007 Ford Edge with Ohio license plate JES 9806. Call 937-233-2080, 1-800-Call-FBI or https://t.co/ny1CUQYPpk with info. pic.twitter.com/8DsWFyD3QK
— FBI Cincinnati (@FBICincinnati) August 6, 2022
Advertisement
ಸುದ್ದಿಗೋಷ್ಠಿಯಲ್ಲಿ ಬಟ್ಲರ್ ಟೌನ್‍ಶಿಪ್ ಪೊಲೀಸ್ ಮುಖ್ಯಸ್ಥ ಜಾನ್ ಪೋರ್ಟರ್ ಮಾತನಾಡಿದ್ದು, ಡೇಟನ್‍ನ ಉತ್ತರದಲ್ಲಿರುವ ಸಣ್ಣ ಓಹಿಯೋ ಪಟ್ಟಣದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಸ್ಟೀಫನ್ ಮಾರ್ಲೋನನ್ನು ಆರೋಪಿ ಎಂದು ಗುರುತಿಸಲಾಗಿದೆ. ಆತ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡಿದ್ದು, ಯಾವ ಉದ್ದೇಶಕ್ಕೆ ಗುಂಡಿನ ದಾಳಿ ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲವೆಂದಿದ್ದಾರೆ. ಇದನ್ನೂ ಓದಿ: ‘ಚಿಕನ್ ಕಥಿ’ ಆಯ್ತು.. ಇಂದು ‘ಚಿಕನ್ ಕಾಲು ಸೂಪ್’ ಮಾಡಿ ಸವಿಯಿರಿ
Advertisement
Advertisement
ಮಾರ್ಲೋ ಓಹಿಯೋದಿಂದ ಪಲಾಯನ ಮಾಡಿದ್ದಾನೆ. ಆತ ಲೆಕ್ಸಿಂಗ್ಟನ್, ಕೆಂಟುಕಿ, ಇಂಡಿಯಾನಾಪೊಲಿಸ್ ಮತ್ತು ಚಿಕಾಗೋದೊಂದಿಗೆ ಸಂಬಂಧವನ್ನು ಹೊಂದಿದ್ದಾನೆ. ಪ್ರಸ್ತುತ ಆತನ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಸುತ್ತಮುತ್ತ ಇದೇ ಮೊದಲ ಹಿಂಸಾತ್ಮಕ ಕೃತ್ಯವೆಂದು ಹೇಳಿದ್ದಾರೆ.