ತಿರುವನಂತಪುರಂ: ಕೇರಳ ಪಾಲಕ್ಕಾಡ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್‌ಗಾಗಿ ಕಾಯುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಲಾರಿ ಹರಿದಿದೆ.
14 ವರ್ಷ ವಯಸ್ಸಿನ ಇರ್ಫಾನಾ, ಮಿತಾ, ರಿಯಾ ಮತ್ತು ಆಯೇಶಾ ಅಪಘಾತಕ್ಕೆ ಬಲಿಯಾಗಿದ್ದಾರೆ. ಇವರು ಶಾಲೆಯ ಹೊರಗೆ ಬಸ್‌ಗಾಗಿ ಕಾಯುತ್ತಿದ್ದರು.
Advertisement
ಮಳೆಯ ರಭಸಕ್ಕೆ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ 8 ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ.