ಚಾಮರಾಜನಗರ: 1.38 ಕೋಟಿ ಮೌಲ್ಯದ 4 ಕ್ವಿಂಟಾಲ್ ಗಾಂಜಾ ನಾಶ

Public TV
0 Min Read
ganja destroyed

ಚಾಮರಾಜನಗರ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ 1.38 ಕೋಟಿ ರೂ. ಮೌಲ್ಯದ 4 ಕ್ವಿಂಟಾಲ್ ಗಾಂಜಾವನ್ನು ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಸಮ್ಮುಖದಲ್ಲಿ ನಾಶ ಪಡಿಸಲಾಯಿತು.

ಮೈಸೂರಿನ ಗುಜ್ಜೇಗೌಡನಪುರದಲ್ಲಿರುವ ಬಯೊಟೆಕ್ ಕುಲುಮೆಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 23 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 1,38,16,000 ರೂ. ಮೌಲ್ಯದ 414 ಕೆಜಿ ಗಾಂಜಾವನ್ನು ಕುಲುಮೆಗೆ ಹಾಕಿ ಸುಡಲಾಗಿದೆ.

ಜಿಲ್ಲೆಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಗಳಲ್ಲಿ ಆದೇಶವಾಗಿದ್ದ ಪ್ರಕರಣಗಳ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಜಿಲ್ಲಾ‌ ಮಾದಕವಸ್ತು ವಿಲೇವಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ, ಎಸ್ಪಿ ಸಮ್ಮುಖದಲ್ಲಿ ಬರೋಬ್ಬರಿ 4 ಕ್ವಿಂಟಾಲ್‌ನಷ್ಟು ಗಾಂಜಾವನ್ನು ನಾಶಪಡಿಸಲಾಗಿದೆ.

Share This Article