ಹೈದರಾಬಾದ್: ದಾಖಲೆ ಇಲ್ಲದ ಸುಮಾರು 7 ಕೋಟಿ ರೂ.ಗಳಷ್ಟು ಹಣವನ್ನು ನಗರದ ಟಾಸ್ಕ್ ಪೋರ್ಸ್ ಪೊಲೀಸರು ಬುಧವಾರ ಜಪ್ತಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ನಂತರ ಇನ್ನೂ ಹಲವೆಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಪತ್ತೆಯಾದ ಹಣ ಹಾಗೂ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸ್ ಆಯುಕ್ತರಾದ ಅಂಜನಿ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಸ್ಥಳದಲ್ಲಿ ಹಣವನ್ನು ಹೊರಿತುಪಡಿಸಿ ಒಂದು ಕಾರು, ಮೂರು ಮೊಬೈಲ್ ಫೋನ್, ಮ್ಯಾಕ್‍ಬುಕ್, ಐಪ್ಯಾಡ್, ಲ್ಯಾಪ್‍ಟಾಪ್, 30 ಚೆಕ್ ಬುಕ್‍ಗಳು ಹಾಗೂ ನೋಟ್ ಕೌಟಿಂಗ್ ಮಷಿನ್‍ಗಳನ್ನು ಜಪ್ತಿ ಮಾಡಲಾಗಿದೆ.
Advertisement
Advertisement
ಅಷ್ಟೇ ಅಲ್ಲದೆ ಜಪ್ತಿಯಾದ ಹಣವನ್ನು ಬರುವ ರಾಜ್ಯದಲ್ಲಿಯ ವಿಧಾನಸಭಾ ಚುನಾವಣೆಗೆ ಉಪಯೋಗಿಸಲು ಇಟ್ಟಿದ್ದರು. ಹಲವು ಕಂಪನಿಗಳು ಹಾಗೂ ಹವಾಲ ನಡೆಸುವವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ನಾವು ಈ ಪ್ರಕರಣದ ತನಿಖೆಗಾಗಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಸಹಾಯ ಪಡೆಯುತ್ತಿದ್ದೇವೆ. ಸದ್ಯ ಈ ಸಂಬಂಧ ವಿಚಾರಣೆಯನ್ನು ಮುಂದುವರಿದಿದೆ ಎಂದು ಅಂಜನಿ ಕುಮಾರ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv