ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ (T20) ಒಂದು ಓವರ್ ಮೇಡನ್ ಮಾಡುವುದು ಅಪರೂಪ. ಹೀಗಿರುವಾಗ ಎಲ್ಲಾ 4 ಓವರ್ ಮೇಡನ್ ಮಾಡಿ 3 ವಿಕೆಟ್ ಕಿತ್ತು ನ್ಯೂಜಿಲೆಂಡ್‌ನ (New Zealand) ವೇಗದ ಬೌಲರ್ ಲಾಕಿ ಫರ್ಗ್ಯೂಸನ್ (Lockie Ferguson) ನೂತನ ದಾಖಲೆ ಬರೆದಿದ್ದಾರೆ.
ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ (Papua New Guinea) ವಿರುದ್ಧ ಫರ್ಗ್ಯೂಸನ್ ಈ ವಿಶಿಷ್ಟ ದಾಖಲೆ ಬರೆದಿದ್ದಾರೆ. 4 ಓವರ್ ಎಸೆದು ಯಾವುದೇ ರನ್ ಬಿಟ್ಟು ಕೊಡದೇ 3 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ ಎಲ್ಲಾ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ.
Advertisement
4️⃣ OVERS 4️⃣ MAIDENS 🤯
Lockie Ferguson becomes the first bowler in Men’s #T20WorldCup history to bowl four maidens in a match 👏#NZvPNG | Read On ➡️ https://t.co/zOfpaMPB18 pic.twitter.com/zqE8ADZEt0
— T20 World Cup (@T20WorldCup) June 17, 2024
Advertisement
Advertisement
ಈ ಹಿಂದೆ 2021ರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ ಅವರು ಪನಮಾ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಮೇಡನ್ ಸಾಧನೆ ಮಾಡಿ 2 ವಿಕೆಟ್ ಪಡೆದಿದ್ದರು.
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಪುವಾ ನ್ಯೂಗಿನಿ 78 ರನ್‌ಗಳಿಗೆ ಆಲೌಟ್ ಆಯ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 12.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಹೊಡೆದು ಜಯ ಸಾಧಿಸಿತು. ಏಳು ವಿಕೆಟ್ ಅಂತದ ಜಯ ಗಳಿಸಿದರೂ ನ್ಯೂಜಿಲೆಂಡ್ ತನ್ನ ಟಿ20 ಕ್ರಿಕೆಟ್ ಅಭಿಯಾನ ಕೊನೆಗೊಳಿಸಿತು. ಇದನ್ನೂ ಓದಿ: ಸೂಪರ್-8ಗೆ ಲಗ್ಗೆಯಿಟ್ಟ ತಂಡಗಳು ಯಾವುವು?
ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಲಾ 6 ಅಂಕ ಪಡೆದು ಸೂಪರ್ 8 ಪ್ರವೇಶಿಸಿದೆ. ನ್ಯೂಜಿಲೆಂಡ್ 2 ಪಂದ್ಯ ಗೆದ್ದು 4 ಅಂಕ ಪಡೆದ ಕಾರಣ ಟೂರ್ನಿಯಿಂದ ನಿರ್ಗಮಿಸಿದೆ.
ಈ ಪಂದ್ಯದ ಮೂಲಕ ಟ್ರೆಂಟ್ ಬೌಲ್ಟ್ (Trent Boult) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದರು. ತನ್ನ ಕೊನೆಯ ಟ್ವೆಂಟಿ2- ವಿಶ್ವಕಪ್ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 4 ಓವರ್ ಎಸೆದು 14 ರನ್ ತೆತ್ತು ಎರಡು ವಿಕೆಟ್ ಗಳಿಸಿದರು.