– ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 105ಕ್ಕೆ ಏರಿಕೆ
ಬೆಂಗಳೂರು: ನಂಜನಗೂಡು ರೋಗಿಯಿಂದ ಮತ್ತೆ ಮೂವರು ವ್ಯಕ್ತಿಗಳಿಗೆ ಸೋಂಕು ಹರಡಿದ್ದು ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಇಂದು ನಾಲ್ಕು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಪೈಕಿ ಇಬ್ಬರು ನಂಜನಗೂಡು ಔಷಧಿ ತಯಾರಿಕಾ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಆಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಬೆಂಗಳೂರಿನ 33 ವರ್ಷದ ವ್ಯಕ್ತಿಗೂ ಕೊರೊನಾ ಬಂದಿದೆ. ಆರಂಭದಲ್ಲಿ ನಂಜನಗೂಡಿನ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ 103ನೇ ರೋಗಿಯಿಂದಾಗಿ ಈ ವ್ಯಕ್ತಿಗೂ ಸೋಂಕು ಬಂದಿದೆ.
Advertisement
ರೋಗಿ 102 ಬೆಂಗಳೂರಿನ 24 ವರ್ಷದ ವ್ಯಕ್ತಿಯಾಗಿದ್ದು, ಇವರು ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ. ಈ ವ್ಯಕ್ತಿಗೆ ವೈರಸ್ ಬಂದಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ನಂಜನಗೂಡಿನ 52ನೇ ರೋಗಿಯಿಂದ 14 ಮಂದಿಗೆ ಕೊರೊನಾ ಬಂದಿದ್ದು, ಮೈಸೂರಿನ ಒಟ್ಟು 17 ಮಂದಿಗೆ ಕೊರೊನಾ ಬಂದಿದೆ.
Advertisement