ತಿರುವನಂತಪುರಂ: ಇಂಧನ ತುಂಬಿಸಿಕೊಳ್ಳಲು ಶ್ರೀಲಂಕಾದಿಂದ ಬಂದ ನಾಲ್ಕು ಅಂತರಾಷ್ಟ್ರೀಯ ವಿಮಾನಗಳು ಶನಿವಾರ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ.
ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ತೀವ್ರ ಇಂಧನ ಕೊರತೆ ಸಮಸ್ಯೆಯನ್ನು ಕೂಡ ಎದುರಿಸುತ್ತಿದೆ. ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತಲುಪಿದ ಒಟ್ಟು 208 ವಿಮಾನಗಳಲ್ಲಿ, ಹೆಚ್ಚಿನ ವಿಮಾನಗಳು ಶ್ರೀಲಂಕನ್ ಏರ್‌ಲೈನ್ಸ್‌ನ ವಿಮಾನಗಳಾಗಿವೆ. ಇಲ್ಲಿಯವರೆಗೆ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಶ್ರೀಲಂಕಾ ಏರ್‌ಲೈನ್ಸ್‌ನ 130 ವಿಮಾನಗಳು ತಿರುವನಂತಪುರದಲ್ಲಿ ನಿಲ್ಲಿಸಿದೆ. ಇದನ್ನೂ ಓದಿ: ಟೊಮೆಟೋ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆ ಹೇಗೆ?
Advertisement
Advertisement
ಇತರ ವಿಮಾನಯಾನ ಸಂಸ್ಥೆಗಳ ವಿಮಾನಗಳು ದುಬೈ, ಓಮನ್ ಏರ್, ಗಲ್ಫ್ ಏರ್, ಏರ್ ಅರೇಬಿಯಾ, ಎಮಿರೇಟ್ಸ್ ಮತ್ತು ಫಿಟ್ಸ್ ವಾಯೇಜ್ ಹೀಗೆ ವಿವಿಧ ಸ್ಥಳಗಳಿಗೆ ಹಾರಾಟ ನಡೆಸುತ್ತದೆ. ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡಿಂಗ್ ಆಗುವುದರಿಂದ ಸುಮಾರು 1.5 ಕೋಟಿ ರೂಪಾಯಿ ತೆರಿಗೆಯನ್ನು ಗಳಿಸಲು ಸಹಾಯಕರವಾಗಿದೆ. ಇದು ಇಂಧನ ತುಂಬುವ ಆದಾಯವನ್ನು ಹೊರತುಪಡಿ ಬರುವ ಹಣವಾಗಿದೆ.
Advertisement
Advertisement
ಮೇ 27 ರಿಂದ ಶ್ರೀಲಂಕಾದ ವಿಮಾನಗಳು ತಿರುವನಂತಪುರಂ ವಿಮಾನನಿಲ್ದಾಣದಿಂದ ಇಂಧನ ತುಂಬಿಸಿಕೊಳ್ಳು ಪ್ರಾರಂಭಿಸಿವೆ. ಅಂದಿನಿಂದ ರಾಷ್ಟ್ರದಲ್ಲಿ ಇಂಧನ ಕೊರತೆ ನಿಯಂತ್ರಣ ಮೀರಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್