ಕ್ಯಾನ್ಬೆರಾ: ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದ ಆಸ್ಟ್ರೇಲಿಯಾದ ರಕ್ಷಣಾ ಹೆಲಿಕಾಪ್ಟರ್ (Australia Chopper Crash) ಕ್ವೀನ್ಸ್‌ಲ್ಯಾಂಡ್‌ನ ಹ್ಯಾಮಿಲ್ಟನ್ ದ್ವೀಪದ ಬಳಿ ಪತನಗೊಂಡಿದ್ದು, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಆಸ್ಟ್ರೇಲಿಯಾದ ಹೆಲಿಕಾಪ್ಟರ್ ಜಂಟಿ ಕಾರ್ಯಾಚರಣೆ ನಡೆಸುತ್ತಿತ್ತು. ಶುಕ್ರವಾರ ರಾತ್ರಿ 10:30 ರ ಹೊತ್ತಿಗೆ MRH-90 ತೈಪಾನ್ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಹೇಳಿದ್ದಾರೆ. ಇದನ್ನೂ ಓದಿ: ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ
Advertisement
Advertisement
ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರೂ ಆಸ್ಟ್ರೇಲಿಯದವರು. ಈ ಅಪಘಾತ ನಿಜಕ್ಕೂ ಭಯಾನಕ ಕ್ಷಣವಾಗಿದೆ. ಕಣ್ಮರೆಯಾದ ಸಿಬ್ಬಂದಿ ಕುಟುಂಬದವರಿಗೆ ಈ ಘಟನೆಯ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ವಿವಿಧ ನಾಗರಿಕ ಏಜೆನ್ಸಿಗಳು, ಕ್ವೀನ್‌ಲ್ಯಾಂಡ್ ಪೊಲೀಸ್, ಆಸ್ಟ್ರೇಲಿಯನ್ ಮಾರಿಟೈಮ್ ಸೇಫ್ಟಿ ಏಜೆನ್ಸಿ, ಯುಎಸ್ ಮಿಲಿಟರಿ ಸಿಬ್ಬಂದಿ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಮಾರ್ಲ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಚೀನಾ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ವರದಿ
Web Stories