ಚಂಡೀಗಢ: 11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ (Gang Rape) ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅತ್ಯಾಚಾರಗೈದ ನಾಲ್ವರು ಅಪ್ರಾಪ್ತ ಆರೋಪಿಗಳಲ್ಲಿ ಓರ್ವ ಆಕೆಯ ಸಹಪಾಠಿಯಾಗಿದ್ದು, ಉಳಿದ ಮೂವರು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಅತ್ಯಾಚಾರಗೈದ ಅಪ್ರಾಪ್ತ ಆರೋಪಿಗಳು ಕಳೆದ 6 ತಿಂಗಳಿನಿಂದ ಸಂತ್ರಸ್ತೆಗೆ ಬೆದರಿಕೆ (Black Mail) ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ
ಈ ಘಟನೆ 15 ದಿನಗಳ ಹಿಂದೆ ನಡೆದಿದ್ದು, ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಲಾಗಿದೆಯೇ ಎಂದು ತಿಳಿದು ಬಂದಿಲ್ಲ. ನಾಲ್ವರು ಅಪ್ರಾಪ್ತರು ತನ್ನ ಮಗಳ ಮೇಲೆ ಶಾಲೆಯ ಆವರಣದ ಪೊದೆಯ ಹಿಂದೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಅಲ್ಲದೇ ಅಪ್ರಾಪ್ತರು ಬಾಲಕಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!
ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆ ತೀವ್ರ ಆಘಾತಕ್ಕೊಳಗಾಗಿದ್ದಳು. 15 ದಿನಗಳ ಬಳಿಕ ಆಕೆ ತನ್ನ ತಾಯಿಯ ಬಳಿ ಈ ಘಟನೆಯ ಬಗ್ಗೆ ಹೇಳಿಕೊಂಡಳು. ವಿಷಯ ತಿಳಿದ ತಕ್ಷಣ ಆಕೆಯ ತಾಯಿ ತರಗತಿ ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರಿಸಿದರು. ಈ ವೇಳೆ ಸಂತ್ರಸ್ತೆಯ ತರಗತಿ ಶಿಕ್ಷಕಿ ಮಗುವಿನ ಸಹಾಯವಾಣಿಗೆ (Child Helpline) ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ
ಈ ಕುರಿತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (POCSO) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಚಾರವೆಸಗಿದ ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿದ್ದು, ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್