UP | ರಾಂಗ್ ರೂಟ್‌ಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಟ್ರಕ್ – ತಂದೆ, 4 ಮಕ್ಕಳು ಸೇರಿ ಐವರು ದುರ್ಮರಣ

Public TV
1 Min Read
Uttar Pradesh Hapur Police

ಲಕ್ನೋ: ರಾಂಗ್ ರೂಟ್‌ಲ್ಲಿ ವೇಗವಾಗಿ ಬಂದ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 4 ಮಕ್ಕಳು ಸೇರಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬುಲಂದ್ ಶಹರ್ ರಸ್ತೆಯ ಮಿನಿಲ್ಯಾಂಡ್ (Miniland) ಶಾಲೆ ಬಳಿ ನಡೆದಿದೆ.

ಮೃತರನ್ನು ರಫೀಕ್ ನಗರದ ನಿವಾಸಿ ಡ್ಯಾನಿಶ್ (40), ಅವರ ಇಬ್ಬರು ಮಕ್ಕಳು ಹಾಗೂ ಸಹೋದರನ ಮಕ್ಕಳು ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸ್ನೇಹಿತನ ತೋಟದಲ್ಲಿರುವ ಈಜುಕೊಳದಿಂದ ಬೈಕ್‌ನಲ್ಲಿ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ:ಬೈಕ್‌ ಅಪಘಾತ – ವಚನಾನಂದ ಶ್ರೀ ಸಹೋದರ ಸಾವು

ಟ್ರಕ್ ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಡಿಕ್ಕಿ ಹೊಡೆದ ಟ್ರಕ್‌ನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಕೈಕೊಟ್ಟು ಬೇರೆ ಮದುವೆಯಾಗಲು ನಿರ್ಧರಿಸಿದ ಪ್ರೇಯಸಿ – ಲಾಡ್ಜ್‌ಗೆ ಕರೆಸಿ 20 ಬಾರಿ ಇರಿದು ಕೊಂದ ಪಾಗಲ್‌ ಪ್ರೇಮಿ

Share This Article