ಆಶ್ರಯ ತಾಣದಿಂದ ನಾಲ್ವರು ಅಪ್ತಾಪ್ತೆಯರು ಪರಾರಿ

Public TV
1 Min Read
HOSTEL

ಪಾಟ್ನಾ: ನಾಲ್ವರು ಅಪ್ರಾಪ್ತ ಬಾಲಕಿಯರು ದುಪ್ಪಟ್ಟಾ ಬಳಸಿ ಬಾಲಕಿಯರ ಆಶ್ರಯ ತಾಣಗಳಿಂದ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ನಾಲ್ವರು ಬಾಲಕಿಯರು ರಾಜ್ಯದ ಪಾಟಲೀಪುತ್ರ ಕಾಲನಿಯಲ್ಲಿರುವ ಸರ್ಕಾರಿ ಅನುದಾನಿತ ಆಶಾ ಕಿರಣ ಬಾಲಕಿಯರ ನಿಲಯದಿಂದ ಭಾನುವಾರ ಎಸ್ಕೇಪ್ ಆಗಿದ್ದಾರೆ. ಅವರಲ್ಲಿ 16 ವರ್ಷದ ಮೂವರು ಬಾಲಕಿಯರು ಮತ್ತು 12 ವರ್ಷದ ಒಬ್ಬ ಬಾಲಕಿ ಇದ್ದಳು. ಇವರು ನಿಲಯ ಕಟ್ಟಡದ ಎರಡನೇ ಮಹಡಿಯಿಂದ ದುಪ್ಪಟ್ಟಾದಿಂದ ಕೆಳಗಿಳಿದು ಪರಾರಿಯಾಗಿದ್ದಾರೆ ಎಂದು  ಪೊಲೀಸ್ ಅಧಿಕಾರಿ ತರ್ಕೇಶ್ವರ್ ನಾಥ್ ತಿವಾರಿ ಹೇಳಿದ್ದಾರೆ.

HOSTEL

ಬಾಲಕಿಯರು ಕಳೆದ ತಿಂಗಳಷ್ಟೇ ಆಶ್ರಯ ತಾಣಕ್ಕೆ ಬಂದಿದ್ದರು. ಆದರೆ ನಾಲ್ವರು ಏಕಕಾಲಕ್ಕೆ ಪರಾರಿಯಾಗಿದ್ದು, ಇದರಿಂದ ಅನೇಕ ಅನುಮಾನಗಳು ಮೂಡುತ್ತಿವೆ. ಸದ್ಯಕ್ಕೆ ಬಾಲಕಿಯರು ತಪ್ಪಿಸಿಕೊಂಡು ಹೋಗಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿವಾರಿ ಹೇಳಿದರು.

ಬಾಲಕಿಯರು ತಪ್ಪಿಸಿಕೊಂಡು ಹೋಗುವಾಗ ಆಶ್ರಯ ತಾಣದ ಭದ್ರತಾ ಸಿಬ್ಬಂದಿ ಕಟ್ಟಡದ ಒಳಗೆ ಇದ್ದರು ಎಂದು ತಿಳಿದು ಬಂದಿದೆ. ಆಶ್ರಯ ತಾಣದ ಅಧಿಕಾರಿಗಳು ಈ ಬಗ್ಗೆ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.

HOSTEL 1

ಬಿಹಾರದಲ್ಲಿ ಈ ಮೊದಲು ಏಪ್ರಿಲ್ ನಲ್ಲಿ ಮುಜಾಫರ್ ಪುರ್ ಆಶ್ರಯ ನಿಲಯದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇನ್ನೂ ಸೆಪ್ಟಂಬರ್ 24ರಂದು ಪಾಟ್ನಾದ ಆಶ್ರಯ ನಿಲಯದಿಂದ ಮಹಿಳೆಯೊಬ್ಬರು ಪರಾರಿಯಾಗಿದ್ದರು.

ಅಕ್ಟೋಬರ್ 29 ರಂದು ಖಗಾರಿಯಾ ಜಿಲ್ಲೆಯ ಆಶ್ರಯ ತಾಣದಲ್ಲಿದ್ದ ಇಬ್ಬರು ಬಾಲಕಿಯರು ಎಸ್ಕೇಪ್ ಆಗಿದ್ದರು. ಪಾಟ್ನಾ ಆಶ್ರಯ ನಿಲಯದಿಂದ ಪರಾರಿಯಾಗಿದ್ದ ಮಹಿಳೆ ನಂತರ ಪತ್ತೆಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *