ಇಡೀ ರಾತ್ರಿ ಬೆಂಗ್ಳೂರು ಸುತ್ತಿಸಿ ಒಲಾ ಚಾಲಕನನ್ನು ಕೂಡಿ ಹಾಕಿ 20 ಸಾವಿರ ದರೋಡೆ!

Public TV
1 Min Read
RMG ola cab driver

ರಾಮನಗರ: ಬೆಂಗಳೂರಿನ ಆಡುಗೋಡಿಯಿಂದ ದಮ್ಮಸಂದ್ರಕ್ಕೆ ಓಲಾ ಕ್ಯಾಬ್ ಬುಕ್ ಮಾಡಿದ ನಾಲ್ವರು ಖದೀಮರು ಕ್ಯಾಬ್ ಚಾಲಕನನ್ನು ಬೆದರಿಸಿ ಹಣವನ್ನು ದರೋಡೆ ಮಾಡಿದ್ದಾರೆ.

ಸೋಮಶೇಖರ್ ಎಂಬವರ ಕಾರನ್ನು ನಾಲ್ವರು ವ್ಯಕ್ತಿಗಳು ಬುಕ್ ಮಾಡಿದ್ದರು. ಶುಕ್ರವಾರ ಆಡುಗೋಡಿಯಲ್ಲಿ ಹತ್ತಿದ ಆ ನಾಲ್ವರು ಪ್ರಯಾಣಿಕರು ಕ್ಯಾಬ್ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಇಡೀ ರಾತ್ರಿ ಬೆಂಗಳೂರನ್ನು ಸುತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಚಾಲಕನ ಎಟಿಎಂ ಕಾರ್ಡ್ ಮೂಲಕ 20 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದಾರೆ.

RMG ola cab driver 1

ಸೋಮಶೇಖರ್ ಅವರನ್ನು ಬೆದರಿಸಿ ದರೋಡೆ ಮಾಡಿದ್ದು ಅಲ್ಲದೇ ಅವರ ಮೊಬೈಲ್‍ನಿಂದ ಪತ್ನಿಗೆ ವಿಡಿಯೋ ಕಾಲ್ ಕೂಡ ಮಾಡಿಸಿದ್ದರು. ದುಷ್ಕರ್ಮಿಗಳು ರಾತ್ರಿ ಬೆಂಗಳೂರಿನಿಂದ ಬಿಡದಿ, ರಾಮನಗರ ಮಾರ್ಗವಾಗಿ ಚನ್ನಪಟ್ಟಣಕ್ಕೆ ಕ್ಯಾಬ್‍ನಲ್ಲಿಯೇ ಚಾಲಕನನ್ನು ಕರೆದುಕೊಂಡು ಬಂದಿದ್ದಾರೆ. ಆ ನಂತರ ಇಂದು ಬೆಳಗ್ಗೆ ಚನ್ನಪಟ್ಟಣದ ಆನಂದ್ ಲಾಡ್ಜ್ ನಲ್ಲಿ ರೂಂ ಮಾಡಿ ಕ್ಯಾಬ್ ಚಾಲಕನನ್ನು ಕೂಡಿ ಹಾಕಿದ್ದಾರೆ. ಬಳಿಕ ಚಾಲಕ  ಲಾಡ್ಜ್ ನ ಕಿಟಕಿ ಹಾರಿ ದುಷ್ಕರ್ಮಿಗಳಿಂದ ತಪ್ಪಿಕೊಂಡು ಸ್ಥಳಿಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಚಾಲಕ ತಪ್ಪಿಸಿಕೊಂಡ ನಂತರ ದರೋಡೆಕೋರರು ಲಾಡ್ಜ್ ನಿಂದ  ಎಸ್ಕೇಪ್ ಆಗಿದ್ದಾರೆ. ಈ ಕುರಿತು ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *