ಅಂಗಡಿಯವರನ್ನೇ ಕಟ್ಟಿ ಹಾಕಿ 26 ಲಕ್ಷ ರೂ. ಕದ್ದ ಕಳ್ಳರು

Public TV
1 Min Read
MONEY

ನವದೆಹಲಿ: ನಾಲ್ವರು ಕಳ್ಳರು ಅಂಗಡಿಯವರನ್ನೇ ಕಟ್ಟಿ ಹಾಕಿ ತಿಜೋರಿಯಲ್ಲಿದ್ದ 26 ಲಕ್ಷ ರೂ. ಅನ್ನು ದೋಚಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

ಶುಕ್ರವಾರ ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಜ್ಯೋತಿ ಮೆಟಲ್ ಸ್ಟೋರ್, ನವಾಬ್ ರಸ್ತೆ, ಸದರ್ ಬಜಾರ್ ನಲ್ಲಿ 12:45ಗೆ ನಾಲ್ವರು ಅಪರಿಚಿತ ವ್ಯಕ್ತಿಗಳು ಅಂಗಡಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಒಬ್ಬನ ಬಳಿ ಪಿಸ್ತೂಲ್ ಇದ್ದು, ಎಲ್ಲರನ್ನು ಬೆದರಿಸಿದ್ದಾನೆ. ಅದು ಅಲ್ಲದೇ ಅಂಗಡಿಯಲ್ಲಿದ್ದ ಕೆಲಸಗಾರ ಮತ್ತು ಇತರ ಇಬ್ಬರನ್ನು ಅಲ್ಲಿಯೇ ಕಟ್ಟಿ ಹಾಕಿ ತಿಜೋರಿಯಲ್ಲಿದ್ದ 26 ಲಕ್ಷವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರೇಪ್ ಎಂಜಾಯ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ – ರಮೇಶ್ ಪ್ರತಿಕೃತಿಗೆ ಪೊರಕೆ ಸೇವೆ

police

ಪೊಲೀಸ್ ಉಪ ಆಯುಕ್ತ(ಉತ್ತರ) ಸಾಗರ್ ಸಿಂಗ್ ಕಲ್ಸಿ ಈ ಕುರಿತು ಮಾಹಿತಿಯನ್ನು ನೀಡಿದ್ದು, ಈ ದರೋಡೆಯ ಬಗ್ಗೆ ಕೆಲಸಗಾರ ಪವನ್ ಪಚೌರಿ(54) ಮಧ್ಯಾಹ್ನ 1:15ಕ್ಕೆ ದೂರನ್ನು ನೀಡಿದರು. ತಕ್ಷಣ ನಮ್ಮ ತಂಡ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ಪರಿಶೀಲನೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು

web money

ಅಂಗಡಿಯಲ್ಲಿದ್ದ ಪಚೌರಿ ಹಾಗೂ ಇತರ ಇಬ್ಬರನ್ನು ಕಟ್ಟಿಹಾಕಿ ತಿಜೋರಿಯಲ್ಲಿದ್ದ 26,01,450 ರೂ. ಅನ್ನು ಆರೋಪಿಗಳು ದರೋಡೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಈ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ

Share This Article