Connect with us

Districts

ತಾಯಿ-ಮಗಳು ಸೇರಿ ನಾಲ್ವರು ಕೆರೆಯಲ್ಲಿ ಮುಳುಗಿ ಸಾವು

Published

on

ರಾಮನಗರ: ತಾಯಿ, ಮಗಳು ಹಾಗೂ ಪಕ್ಕದ ಮನೆಯ ಇಬ್ಬರು ಬಾಲಕಿಯರು ಸೇರಿ ಒಟ್ಟು ನಾಲ್ವರು ಕೆರೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ರಾಮನಗರದಲ್ಲಿ ನಡೆದಿದೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರದ ರಾಮಯ್ಯನ ಕೆರೆಯಲ್ಲಿ ಈ ಘಟನೆ ನಡೆದಿದೆ. ವಿರೂಪಾಕ್ಷಿಪುರದ ಗಾಯಿತ್ರಿ (35) ಮಗಳು ಪೂರ್ಣಿಮಾ (10), ಪಕ್ಕದ ಮನೆಯವರಾದ ಅನು (14) ಹಾಗೂ ನಮ್ರತಾ (10) ಮೃತ ದುರ್ದೈವಿಗಳು.

ವಿರೂಪಾಕ್ಷಿಪುರದ ರಾಮಯ್ಯನಕೆರೆಗೆ ಬಟ್ಟೆ ತೊಳೆಯಲು ಗಾಯಿತ್ರಿ ತಮ್ಮ ಮಗಳ ಜೊತೆ ತೆರಳಿದ್ದರು. ಈ ವೇಳೆ ಪಕ್ಕದ ಮನೆಯ ಮಕ್ಕಳು ಸಹ ಬಂದಿದ್ರು. ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಅನು ಹಾಗೂ ನಮ್ರತಾ ಆಟವಾಡುತ್ತಾ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ರಕ್ಷಿಸಲು ಮುಂದಾದ ಪೂರ್ಣಿಮಾ ಹಾಗೂ ಗಾಯಿತ್ರಿ ಸಹ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸದ್ಯ ನಾಲ್ವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದ್ದು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Click to comment

Leave a Reply

Your email address will not be published. Required fields are marked *