ಲಕ್ನೋ: ಉತ್ತರ ಪ್ರದೇಶದ (Uttar Pradesh) 10 ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ (Board Exams) ಮೊದಲ ದಿನವೇ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಗೈರು ಹಾಜರಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಯೋಗಿ ಸರ್ಕಾರವು ನಕಲು ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿದೆ. ಈ ಬೆನ್ನಲ್ಲೆ ಗುರುವಾರದಿಂದ ಪರೀಕ್ಷೆ ಆರಂಭವಾಗಿದೆ. ಯುಪಿ ಬೋರ್ಡ್‍ನ ಪ್ರಧಾನ ಕಚೇರಿಯ ವರದಿಯ ಪ್ರಕಾರ ಪರೀಕ್ಷೆಗೆ ನೋಂದಣಿ ಮಾಡಿಕೊಂಡ 31 ಲಕ್ಷಕ್ಕೂ ಅಧಿಕ 10ನೇ ತರಗತಿ ವಿದ್ಯಾರ್ಥಿಗಳಲ್ಲಿ 2.18 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾಗೆಯೇ ದ್ವಿತೀಯ ಪಿಯುಸಿಯ 25.80 ಲಕ್ಷ ವಿದ್ಯಾರ್ಥಿಗಳ ಪೈಕಿ 1.83 ಲಕ್ಷ ವಿದ್ಯಾರ್ಥಿಗಳು ಪರಿಕ್ಷೆಗೆ ಗೈರಾಗಿದ್ದಾರೆ. ನಕಲು ತಡೆಗೆ ಕಠಿಣ ಕ್ರಮ ತೆಗೆದುಕೊಂಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
Advertisement
Advertisement
ಇನ್ನೂ ಮೊದಲ ದಿನವೇ 9 ಪ್ರಾಕ್ಸಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಗಾಜಿಪುರದಲ್ಲಿ ಐವರು ಹಾಗೂ ಮಥುರಾದ, ಜೌನ್‍ಪುರ, ಬುಲಂದ್‍ಶಹರ್ ಹಾಗೂ ಲಕ್ನೋದಲ್ಲಿ ತಲಾ ಒಬ್ಬರನ್ನು ಬಂಧಿಸಲಾಯಿತು. ಜೊತೆಗೆ 11 ವಿದ್ಯಾರ್ಥಿಗಳು ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ. ಪ್ರೌಢಶಾಲೆಯ 8 ಹುಡುಗರು ಮತ್ತು ಮೂವರು ಹುಡುಗಿಯರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ, ತಮಿಳುನಾಡು ಬೇಟೆಗಾರರ ನಡುವೆ ಗುಂಡಿನ ಚಕಮಕಿ – ಒಬ್ಬ ಬೇಟೆಗಾರ ಸಾವು?
Advertisement
Advertisement
ನಕಲು ತಡೆಗೆ ಕ್ರಮ: ವಾರ್ಷಿಕ ಪರೀಕ್ಷೆಗಳಲ್ಲಿ ನಕಲು ತಡೆಗೆ ಯುಪಿ ಸರ್ಕಾರ ಹತ್ತಾರು ಕಠಿಣ ಕ್ರಮ ತೆಗೆದುಕೊಂಡಿದೆ. ರಾಜ್ಯದ 75 ಜಿಲ್ಲೆಗಳ 8,753 ಪರೀಕ್ಷಾ ಕೇಂದ್ರಗಳ 1.43 ಪರೀಕ್ಷಾ ಕೊಠಡಿಗಳಲ್ಲಿ ವಾಯ್ಸ್ ರೆಕಾರ್ಡರ್ ಸಹಿತ 3 ಲಕ್ಷ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದ ಒಳಗೆ ಬಿಡುತ್ತಿದ್ದಾರೆ. ಇನ್ನೂ ವಿದ್ಯುನ್ಮಾನ ಡಿವೈಸ್‍ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಭರ್ಜರಿ ಕೊಡುಗೆ – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಘೋಷಣೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k