ಲಕ್ನೋ: ಸೀರೆ ಮಳಿಗೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಮದನಪುರ ಇಬ್ಬರು ಕಾರ್ಮಿಕರು ಹಾಗೂ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಮೃತರು. ಸೀರೆಮಳಿಗೆಯಲ್ಲಿ ಕಾರ್ಮಿಕರು ನಿಗದಿಪಡಿಸಿದ್ದ ಕೊಠಡಿಯಲ್ಲಿ ಅಡುಗೆ ಮಾಡುತ್ತಿರುವಾಗ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಟ್ಟಡದ ಆವರಣದಲ್ಲೆಲ್ಲಾ ಬೆಂಕಿ ಹರಡಿದೆ.
Advertisement
Advertisement
ಬೆಂಕಿ ಕಟ್ಟಡವನ್ನು ಆವರಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದರು. ತಕ್ಷಣ ಸ್ಥಳೀಯರು ಬಂದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಅಗ್ನಿ ಶಾಮಕ ದಳದವರಿಗೂ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಾರ್ಮಿಕರು ಮೃತಪಟ್ಟಿದ್ದರು. ಇದನ್ನೂ ಓದಿ: ಔಷಧಿ ಘಟಕದಲ್ಲಿ ಅಗ್ನಿ ದುರಂತ: 6 ಮಂದಿ ಸಾವು
Advertisement
ಸೀರೆ ಮಳಿಗೆಯಲ್ಲಿ ಸೀರೆ ಮತ್ತು ಪ್ಯಾಕೇಜಿಂಗ್ ಸಾಮಾಗ್ರಿಗಳಿದ್ದು, ಸಿಂಥೆಟಿಕ್ ಸ್ವರೂಪದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮಳಿಗೆ ಏಕೈಕ ಪ್ರವೇಶ ಮತ್ತು ನಿರ್ಗಮನ ಸ್ಥಳವಿತ್ತು. ಇಲ್ಲೇ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಸಂತ್ರಸ್ತರು ಹೊರಗೆ ಬರಲು ವಿಫಲರಾಗಿದ್ದಾರೆ. ಇದರಿಂದಾಗಿ ಕಾರ್ಮಿಕರು ಕಾರ್ಮಿಕರು ಸಾವಿಗೀಡಾಗಿದ್ದಾರೆ.
Advertisement
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ, ಮೃತರ ಕುಟುಂಬಕ್ಕೆ 4 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಇದನ್ನೂ ಓದಿ: ತಮ್ಮನನ್ನು ಕೊಲೆಗೈದ ಆರೋಪಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ – ಗಲ್ಲು ಶಿಕ್ಷೆ ನೀಡಿ ಎಂದ ಅಣ್ಣ