ಮಾಸ್ಕೋ: ರಾಷ್ಯಾದ ರಾಜಧಾನಿ ಪಶ್ಚಿಮ ಮಾಸ್ಕೋ (Western Moscow) ನಗರದಲ್ಲಿರುವ ಶಾಪಿಂಗ್ ಮಾಲ್ (Shopping Mall) ಒಂದರಲ್ಲಿ ಬಿಸಿನೀರಿನ ಪೈಪ್ (Hot Water Pipe Burst) ಒಡೆದು ನಾಲ್ವರು ಸಾವನ್ನಪ್ಪಿ , 10 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಸಂಬಂಧ ಅಲ್ಲಿನ ಮೇಯರ್ ಮೇಯರ್ ಸೆರ್ಗೆಯ್ ಸೊಬಯಾನಿನ್ ಪ್ರತಿಕ್ರಿಯಿಸಿ, ಗಾಯಗೊಂಡವರಲ್ಲಿ ಕೆಲವರು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ತುರ್ತು ಸೇವೆಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಸ್ಥಳದಲ್ಲಿ ಯಾವುದೇ ಅಮೋನಿಯಾ ಸೋರಿಕೆಯಾಗಿಲ್ಲ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಅವೈಡ್ ಮಾಡ್ತಿದ್ದ ಲವ್ವರ್ ಮನೆಗೆ ಹೋಗಿ ಗಲಾಟೆ ಮಾಡಿ ಚಾಕು ಹಾಕಿದ್ಳು!
Advertisement
Advertisement
ವ್ರೆಮೆನಾ ಗೋಡಾ (Vremena Goda) (ದಿ ಸೀಸನ್ಸ್) ಎಂದು ಕರೆಯಲ್ಪಡುವ ಈ ಮಾಲ್ 2007 ರಲ್ಲಿ ಪ್ರಾರಂಭವಾಗಿದೆ. ಇದರಲ್ಲಿ 150 ಕ್ಕೂ ಹೆಚ್ಚು ಮಳಿಗೆಗಳಿವೆ.
Web Stories