ತಿರುವನಂತರಂ: ಕಸ್ಟಡಿಯಲ್ಲಿ ಸಹೋದರರಿಬ್ಬರಿಗೆ ಚಿತ್ರಹಿಂಸೆ ನೀಡಿದ ಹಿನ್ನೆಲೆ ಕೇರಳದ (Kerala) ಕಿಲ್ಲಿಕೋಳೂರು ಪೊಲೀಸ್ ಠಾಣೆಯ (Killikolur police station) ನಾಲ್ವರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಗಂಭೀರವಾಗಿ ಗಾಯಗೊಂಡ ಇಬ್ಬರು ಸಹೋದರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಸ್ಟ್ 25ರಂದು ಈ ಘಟನೆ ನಡೆದಿದ್ದು, ಮಾದಕ ದ್ರವ್ಯ ದಂಧೆ ಪ್ರಕರಣದಡಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ನೀಡಲು ವಿಘ್ನೇಶ್ ಠಾಣೆಗೆ ಬಂದಿದ್ದನು. ಆದರೆ ಇದು ಮಾದಕ ದ್ರವ್ಯ ದಂಧೆ ಪ್ರಕರಣವಾಗಿರುವುದರಿಂದ ಆರೋಪಿಗೆ ಜಾಮೀನು ನೀಡಲು ಪೊಲೀಸರು ನಿರಾಕರಿಸಿದರು. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್
ಈ ವೇಳೆ ತನ್ನ ಕಿರಿಯ ಸಹೋದರ ವಿಘ್ನೇಶ್ ಅನ್ನು ಹುಡುಕಿಕೊಂಡು ವಿಷ್ಣು ಠಾಣೆಗೆ ಬಂದಿದ್ದಾರೆ. ನಂತರ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಚೌಹಾಣ್ ಅವರು ಸಂಚಾರ ಉಲ್ಲಂಘನೆಯನ್ನು ಉಲ್ಲೇಖಿಸಿ ವಿಷ್ಣು ಅವರೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಚೌಹಾಣ್ ಇಬ್ಬರು ಸಹೋದರರನ್ನು ಎಳೆದೊಯ್ದು ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಘಟನೆಯಿಂದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಪೊಲೀಸರು, ಮಾದಕ ದ್ರವ್ಯ ದಂಧೆಯ ಆರೋಪಿಗೆ ಜಾಮೀನು ನೀಡಲು ಆಗಮಿಸಿದ ಸಹೋದರರು ಠಾಣೆಯೊಳಗೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೈವಾರಾಧನೆ ಹಿಂದುತ್ವದ ಭಾಗವಲ್ಲವೆಂದ ಚೇತನ್ ವಿರುದ್ಧ ದೂರು ದಾಖಲು